ಎ.ಆರ್. ಕೃಷ್ಣಶಾಸ್ತ್ರಿ ಅವರು ಬರೆದ ಕೃತಿ ಸರ್ವಜ್ಞ ಕವಿ. ಈ ಕೃತಿ ಮೊದಲು 1940 ರಲ್ಲಿ ಪ್ರಕಟಗೊಂಡಿತ್ತು. ಈ ಕೃತಿಯಲ್ಲಿ ಸರ್ವಜ್ಞನ ದೇಶ, ಮತ, ಕಾಲ, ದೇವರು-ಗುರು-ಜ್ಞಾನಿ, ರಾಜ-ಧರ್ಮ-ರಾಜಭಕ್ತಿ, ಕಾಲಜ್ಞಾನ-ವೈದ್ಯ- ವಾದ, ನೀತಿ ಕಾವ್ಯ: ಸಾಹಿತ್ಯದಲ್ಲಿ ಅದರ ಸ್ಥಾನ, ಸರ್ವಜ್ಞನ ಶೈಲಿ, ತ್ರಿಪದಿ ಹೀಗೆ ಒಟ್ಟು 20 ಅಧ್ಯಾಯಗಳ ಮೂಲಕ ಸರ್ವಜ್ಞನ ಕುರಿತು ಸಮಗ್ರ ಬದುಕು-ಸಾಹಿತ್ಯ ಕುರಿತ ಮಾಹಿತಿ ಒಳಗೊಂಡ ಕೃತಿ ಇದು.
ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913) ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...
READ MORE