ಲೇಖಕಿ ಮುಕ್ತಾಯಕ್ಕ ಕತ್ತಿ ಅವರ ’ ಸಾರ್ಥಕ ಬದುಕಿನ ಶಿಕ್ಷಕ ಹ.ಮ ಪೂಜಾರ’ ಕೃತಿಯು ಹ.ಮ ಪೂಜಾರ ಅವರ ಜೀವನ ಚಿತ್ರಣವಾಗಿದೆ. ಖ್ಯಾತ ಮಕ್ಕಳ ಸಾಹಿತಿಗಳಲ್ಲಿ ಸಿಂದಗಿಯ ಹ.ಮ.ಪೂಜಾರ ಪ್ರಮುಖರು. ಮಕ್ಕಳ ಕತೆ, ಕಾವ್ಯ, ಕಾದಂಬರಿಗಳನ್ನು ಬರೆದು ಮಕ್ಕಳ ಪ್ರೀತಿಗೆ ಪಾತ್ರರಾಗಿ, ರಾಷ್ಟ್ರಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳಿಗೆ ಭಾಜನರಾದವರು. ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು, ಕಮ್ಮಟ, ಕಾರ್ಯಾಗಾರಗಳನ್ನು ರೂಪಿಸಿ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವಲ್ಲಿ ನಿರಂತರ ತೊಡಗಿದವರು. ವಿದ್ಯಾಚೇತನ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಾ ಮಕ್ಕಳ ಸಾಹಿತ್ಯದ ಕುರಿತಾಗಿ ಹಲವಾರು ಪುಸ್ತಕಗಳನ್ನು ಹೊರತಂದಿದ್ದಾರೆ. ಸಿಂದಗಿ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವು ಗೌರವಗಳು ಅವರಿಗೆ ಒದಗಿ ಬಂದಿವೆ. ಈ ಎಲ್ಲ ಕುರಿತಾದ ವಿಚಾರಗಳು ಇಲ್ಲಿ ಕಥಾ ಹಂದರವಾಗಿ ಮೂಡಿಬಂದಿದೆ. ಮೇರು ಸಾಹಿತಿಯ ಕುರಿತಾಗಿ ಹೊಸ ತಲೆಮಾರಿನವರು ಅಭ್ಯಾಸ ಮಾಡುವ ಸಂದರ್ಭದಲ್ಲಿ ಈ ಕೃತಿಯು ಪ್ರಯೋಜನಕಾರಿ.
ಲೇಖಕಿ ಮುಕ್ತಾಯಕ್ಕ ಕತ್ತಿ ಅವರು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನವರು. ಎರಡು ಕೃತಿಗಳನ್ನು ಹೊರತಂದಿದ್ದಾರೆ. ಅವರು ವಿಜಯಪುರ ಜಿಲ್ಲೆಯ ಉದಯೋನ್ಮುಖ ಲೇಖಕಿ. ಕೃತಿಗಳು: ಸಾರ್ಥಕ ಬದುಕಿನ ಶಿಕ್ಷಕ ಹ.ಮ. ಪೂಜಾರ (ಜೀವನ ಚರಿತ್ರೆ) ...
READ MORE