‘ಸರೋದ್ ಸ್ವರಯಾನ’ ಕೃತಿಯು ಗಣೇಶ ಅಮೀಗನಡ ಹಾಗೂ ರಘಪತಿ ತಾಮ್ಹನ್ ಕರ್ ಅವರ ಸಂಪಾದಿತ ಕೃತಿ. ಈ ಕೃತಿಯು ಪಂಡಿತ್ ರಾಜೀವ ತಾರನಾಥ ಅವರ ಕುರಿತ ವಿಸ್ತೃತ ವಿವರಣೆಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಖ್ಯಾತಿಯ ಪಂಡಿತ್ ರಾಜೀವ ತಾರಾನಾಥರು ಜಗತ್ತಿನ ಅತ್ಯಂತ ಉತ್ಕೃಷ್ಟ ಸರೋದ್ ವಾದಕರಲ್ಲಿ ಅಗ್ರಗಣ್ಯರು. ತೊಂಬತ್ತರ ಹರೆಯದವರು. ತೊಂಬತ್ತರ ಜನ್ಮದಿನಕ್ಕೆ ಅವರ ಕುರಿತ ಲೇಖನಗಳನ್ನು ಇಲ್ಲಿ ಕಾಣಬಹುದು. ಚಂದ್ರಶೇಖರ ಕಂಬಾರ, ನ.ರತ್ನ, ರಹಮತ್ ತರೀಕೆರೆ, ಕೃಷ್ಣಮೂರ್ತಿ ಚಂದರ್, ಸುಮಂಗಲಾ ಅವರ ಲೇಖನಗಳು ಇಲ್ಲಿವೆ. ಜೊತೆಗೆ, ಕೀರ್ತಿನಾಥ ಕುರ್ತಕೋಟಿ , ಯು.ಆರ್. ಅನಂತಮೂರ್ತಿ , ಜಯಂತ ಕಾಯ್ಕಿಣಿ, ಗಿರೀಶ ಕಾಸರವಳ್ಳಿ , ಶ್ರೀದೇವಿ ಕಳಸದ ಅವರ ಸಂದರ್ಶನಗಳಿವೆ. ಸಂಗೀತವನ್ನೇ ಉಸಿರಾಡಿ, ಹೆಸರಾದ ರಾಜೀವ ತಾರಾನಾಥರ ಸಂಗೀತ ಪಯಣ ಅರಿಯಲು ನೆರವಾಗುವ ಕೃತಿ ಇದು.
ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಕನ್ನಡ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ ಕುರಿತು ಪಿಎಚ್.ಡಿ. ಮೂರು ವರ್ಷ ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ ಸೇವೆ, ಈಗ ಮೈಸೂರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರ. ರಂಗಭೂಮಿ ಕುರಿತ ಲೇಖನಗಳ ಸಂಕಲನ 'ಪ್ರಯೋಗ ಪ್ರಸಂಗ' ಕೃತಿ (2004), ವಿಜಾಪುರದ ಯುವ ಲೇಖಕರ ವೇದಿಕೆಯ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದೆ. ಏಣಗಿ ಬಾಳಪ್ಪ ಅವರ ರಂಗಾನುಭವ ಕಥನ 'ಬಣ್ಣದ ಬದುಕಿನ ಚಿನ್ನದ ದಿನಗಳು' ...
READ MORE