ಹಿರಿಯ ಲೇಖಕ ಮ.ಸು. ಮನ್ನಾರ್ ಕೃಷ್ಣರಾವ್ ಅವರ ಕೃತಿ-ಸರ್ದಾರ್ ವಲ್ಲಭಬಾಯ್ ಪಟೇಲ್. ಉಕ್ಕಿನ ಮನುಷ್ಯ ಎಂದೇ ಖ್ಯಾತಿಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಜೀವನ ಚರಿತ್ರೆಯನ್ನು ಕಟ್ಟಿ ಕೊಡುವ ಕೃತಿ ಇದು. ದೇಶಕ್ಕೆ ಸ್ವಾತಂತ್ಯ್ರ ಸಿಕ್ಕಿ ನಂತರ ದೇಶದಲ್ಲಿದ್ದ ಸಣ್ಣ ಪುಟ್ಟ ಅರಸು ಮನೆತನಗಳನ್ನು, ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸುವಲ್ಲಿ ಸರ್ದಾರ್ ವಲ್ಲಭ ಭಾಯ್ ಅವರ ಪಾತ್ರ ಹಿರಿದು. ಇಂತಹ ಹತ್ತು ಹಲವು ಸಂಗತಿಗಳನ್ನು ಒಳಗೊಂಡ ಕೃತಿ ಇದು.
ಮ.ಸು. ಮನ್ನಾರ್ ಕೃಷ್ಣರಾವ್ ಮಂಡ್ಯ ನಗರದ ಮೈಷುಗರ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈವರೆಗೆ 12 ಕವನ ಸಂಕಲನಗಳು, 8 ಸತ್ಯ ಘಟನೆಗಳ ಗದ್ಯ ಕೃತಿಗಳು ಮತ್ತು ಅದ್ವಿತೀಯ ಭಾರತೀಯ ಜಿ.ಡಿ. ಬಿರ್ಲಾ ಅವರ ಜೀವನ ಚರಿತ್ರೆಗಳನ್ನು ಪ್ರಕಟಿಸಿದ್ದಾರೆ. ...
READ MORE