ಸರಳ ಸಜ್ಜನ ರಾಜಕಾರಣಿ ಎಂ. ಸಿ. ಮನಗೂಳಿ

Author : ಎ. ಆರ್. ಹೆಗ್ಗನದೊಡ್ಡಿ

₹ 60.00




Year of Publication: 2021
Published by: ಬೆರಗು ಪ್ರಕಾಶನ
Address: ಕಡಣಿ-586202, ಆಲಮೇಲ ತಾಲ್ಲೂಕು, ವಿಜಯಪುರ ಜಿಲ್ಲೆ.
Phone: 7795341335

Synopsys

ಲೇಖಕ ಎ. ಆರ್. ಹೆಗ್ಗನದೊಡ್ಡಿ ಅವರ ಕೃತಿ- ’ ಸರಳ ರಾಜಕಾರಣಿ ಎಂ.ಸಿ.ಮನಗೂಳಿ’ . ಈ ಕೃತಿಯು ಎಂ. ಸಿ. ಮನಗೂಳಿ ಅವರ ಜೀವನ ಚರಿತ್ರೆಯಾಗಿದೆ. ಎಂ. ಸಿ. ಮನಗೂಳಿ ಅವರು ನಾಡಿನ ಸರಳ-ಸಜ್ಜನ ರಾಜಕಾರಣಿಯಲ್ಲಿ ಓರ್ವರು. ಎಂಬತ್ತೈದರ ಇಳಿವಯಸ್ಸಿನಲ್ಲಿ ಉತ್ಸಾಹಿ ಯುವಕರಂತೆ ದಣಿವಿಲ್ಲದೆ ಜನಸೇವೆ ಗೈಯುತ್ತಲೆ ಲಿಂಗೈಕ್ಯರಾದರು. ಗ್ರಾಮ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿದ ಮನಗೂಳಿ, ಎರಡು ಬಾರಿ ಶಾಸಕರಾಗಿ, ಎರಡೂ ಸಲ ಸಚಿವರಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಸಿಂದಗಿ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ಕೆರೆ ನಿರ್ಮಾಣ ಹಾಗೂ ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಯ ಮೂಲಕ ಇಂಡಿ ಮತ್ತು ಸಿಂದಗಿ ತಾಲೂಕಿನ ರೈತರ ಜಮೀನಿಗೆ ನೀರು ಹಾಗೂ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸಿದ್ದಾರೆ: ಆಲಮೇಲ ತಾಲ್ಲೂಕು ಮಾಡುವಲ್ಲಿ ಮನಗೂಳಿ ಅವರ ಪಾತ್ರ ಹಿರಿದು. ತಾಲ್ಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

About the Author

ಎ. ಆರ್. ಹೆಗ್ಗನದೊಡ್ಡಿ

ಲೇಖಕ ಎ.ಆರ್.ಹೆಗ್ಗನದೊಡ್ಡಿ ಅವರು ಸಿಂದಗಿಯ ಎಚ್, ಜಿ, ಕಾಲೇಜನಲ್ಲಿ 25 ವರ್ಷಗಳಿಂದ ಶಿಕ್ಷಣಶಾಸ್ತ್ರ ಉಪನ್ಯಾಸಕರಾಗಿ, ನಂತರ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವೇಕ ಪ್ರಕಾಶನ ಸ್ಥಾಪಿಸಿ, ಶೈಕ್ಷಣಿಕ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ. ರಾಜ್ಯೋತ್ಪಾನ ಬಳಗದ ತಾಲೂಕು ಸಂಚಾಲಕರಾಗಿ, ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾಗಿದ್ದಾರೆ.  ಕೃತಿಗಳು: ಸರಳ ಸಜ್ಜನಿಕೆಯ ರಾಜಕಾರಣಿ ಎಂ.ಸಿ. ಮನಗೂಳಿ ...

READ MORE

Related Books