ಲೇಖಕ ಡಾ. ಸೂರ್ಯಕಾಂತ ಸುಜ್ಜಾತ್ ಅವರ ಕೃತಿ-ಸಂತ ಶಿರೋಮಣಿ ಗುರು ರವಿದಾಸ. ಲೇಖಕರು ಉತ್ತಮ ಅನುವಾದಕರು. ಮರಾಠಿಯಿಂದ ಕನ್ನಡಕ್ಕೆ 'ಮಹಾತ್ಮ ಜ್ಯೋತಿಬಾಪುಲೆ ಅವರ ಗುಲಾಮಗಿರಿ'ಹಾಗೂ' ಮಹಾರಾಜ ಗಾಡ್ಗೆ ಬಾಬಾ ' ಹೀಗೆ ವಿವಿಧ ಕೃತಿಗಳನ್ನು ಅನುವಾದಿಸಿದ್ದಾರೆ. ಸಮಾಜಮುಖಿ ಚಿಂತಕ "ಸಂತ ಶಿರೋಮಣಿ ರವಿದಾಸ" ಜೀವನ ಕುರಿತು ವಿವಿಧ ಆಯಾಮಗಳನ್ನು ಪರಿಚಯಿಸಿದ್ದಾರೆ. ಗುರು ರವಿದಾಸರ ಸಾಮಾಜಿಕ ವಿಚಾರಧಾರೆಗಳನ್ನು ಕುರಿತು ಚರ್ಚಿಸುವಾಗ ಭಾರತದ ಚರಿತ್ರೆ ರಚನೆಗೊಂಡಿರುವ ಆರ್ಯರ ಆಗಮನ, ಮುಸ್ಲಿಮರ ದಾಳಿ ಹಾಗೂ ಬ್ರಿಟಿಷರ ಪ್ರವೇಶ ಹೀಗೆ ಮೂರು ಚರಿತ್ರೆ ಅಧ್ಯಯನಕಾರರ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಹಾತ್ಮ ಜ್ಯೋತಿಬಾ ಪುಲೆ, ಸಾವಿತ್ರಿ ಬಾಪುಲೆ, ಪೆರಿಯಾರ್, ಸಾಹು ಮಹಾರಾಜ, ಬಾಬಾಸಾಹೇಬ ಡಾ. ಅಂಬೇಡ್ಕರ್ ಮುಂತಾದವರ ವೈಚಾರಿಕ ಅಂಶಗಳಿಗೆ ಒರೆಹಚ್ಚಿ ಕೆಲವು ಪ್ರಮುಖ ಪ್ರಶ್ನೆಗಳೊಂದಿಗೆ ಮುಖಾಮುಖಿಯಾಗಿಸಿದ್ದು ಈ ಕೃತಿಯ ವೈಶಿಷ್ಟ್ಯ. ಮಧ್ಯ ಏಷ್ಯಾದಿಂದ ಬಂದ ಆರ್ಯರು ಭಾರತದಲ್ಲಿ ಆಗಲೇ ಪ್ರಬಲವಾಗಿ ನೆಲೆಯೂರಿದ್ದ ಕೃಷಿಕ ಸಮುದಾಯದ ಬೌದ್ಧರು ಹಾಗೂ ವ್ಯಾಪಾರಸ್ಥರಾಗಿದ್ದ ಭಾರತೀಯ ಧರ್ಮವೇ ಆಗಿ ನೆಲೆನಿಂತಿದ್ದ ಜೈನಧರ್ಮದೊಂದಿಗಿನ ಸಾಂಸ್ಕೃತಿಕ ತಿಕ್ಕಾಟವನ್ನು ಬಂಡವಾಳವನ್ನಾಗಿಸಿ ಕೊಂಡು, ತಮ್ಮ ಯಜ್ಞ,ಯಾಗ, ದೇವರು, ಮಂತ್ರಗಳೆಂಬ ಕುತಂತ್ರ ಬುದ್ಧಿಯಿಂದಾಗಿ ಭಾರತದಲ್ಲಿ ತಮ್ಮ ನೆಲೆಯನ್ನು ಭದ್ರಗೊಳಿಸಿಕೊಂಡರು. ದೇವಾನುದೇವತೆಗಳ ಸೃಷ್ಟಿ, ಆ ಮೂಲಕ ಮೇಲು-ಕೀಳು, ಸ್ಪರ್ಶ, ಅಸ್ಪೃಶ್ಯ, ಆಹಾರ ಪದ್ಧತಿ ಮುಂತಾದವುಗಳೆಲ್ಲವನ್ನು ದೇವರ ಹೆಸರಿನಲ್ಲಿ ನಿರ್ಬಂಧಿಸಲು ಮುಂದಾದರು. ಅವರ ಕುತಂತ್ರಗಳಿಗೆ ಬೌದ್ಧರ ವಿರುದ್ಧ ಸೇಡು ತೀರಿಸಿಕೊಳ್ಳಲು ಸೆಣಸಾಡುತ್ತಿದ್ದ ಜೈನರು ಧಾರ್ಮಿಕವಾಗಿ ಹೊಂದಾಣಿಕೆ ಮಾಡಿಕೊಂಡರು. ಜೈನರು ಹಾಗೂ ವೈದಿಕರು ಒಂದುಗೂಡಿ ಭಾರತದ ಮೂಲ ದುಡಿಮೆ ಸಂಸ್ಕೃತಿಯ ಧರ್ಮವಾಗಿದ್ದ ಅಥವಾ ನೆಲೆ ಸಂಸ್ಕೃತಿಯನ್ನು ಸತ್ಯ ನೀತಿಗಳ ಮೂಲಕ ಧರ್ಮರಕ್ಷಣೆಗೆ ಮುಂದಾಗಿದ್ದ ಬೌದ್ಧಧರ್ಮವನ್ನು ದೇಶದಿಂದಲೇ ಹೊರದೂಡಲು ಪಣತೊಟ್ಟರು. ಈ ಹಂತದ ಬಹು ಸೂಕ್ಷ್ಮವಾದ ವಿಷಯವನ್ನು ಡಾ. ಸೂರ್ಯಕಾಂತ್ ಸುಜ್ಯಾತರವರು ತಮ್ಮ ಸಂತ ಶಿರೋಮಣಿ ರವಿದಾಸ ಎಂಬ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.
ಗುರು ರವಿದಾಸರ ಜೀವನ ವೃತ್ತಾಂತ, ಗುರು ರವಿದಾಸರ ಸಾಮಾಜಿಕ ವಿಚಾರಧಾರೆ, ಗುರು ರವಿದಾಸ ಹಾಗೂ ರಮಾನಂದ, ಗುರು ರವಿದಾಸ್ ಮತ್ತು ರಾಮ,ಗುರು ರವಿದಾಸ ಸಾಮ್ಯಸಮಾಜವಾದಿ ಪರಿಕಲ್ಪನೆ, ಗುರು ರವಿದಾಸರ ಕೆಲವು ದೋಹೆಗಳು, ಮೊದಲಾದ ಅಂಶಗಳನ್ನು ಅಡಗಿಸಿಕೊಂಡಿರುವ ಈ ಕೃತಿ ಜನ ಮತ್ತು ಪ್ರಭುತ್ವಕ್ಕೆ ಸಂಬಂಧಿತ ಸಾಂಸ್ಕೃತಿಕ ಬದುಕಿನ ವಿವಿಧ ಮಜಲುಗಳನ್ನು ವಿಸ್ತೃತ ಮಾಹಿತಿಯೊಂದಿಗೆ ಚರ್ಚೆಗೆ ಒಳಪಡಿಸುತ್ತದೆ. ತಳಸಮುದಾಯಗಳ ಅಧ್ಯಯನ ಮಾಡುವ ಆಸಕ್ತರಿಗೆ ಈ ಕೃತಿಯು ಉತ್ತಮ ಆಕರ ಗ್ರಂಥ.
ಲೇಖಕ ಡಾ. ಸೂರ್ಯಕಾಂತ ಎಸ್. ಸುಜ್ಯಾತ ಅವರು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದೇಗಾಂವ ಗ್ರಾಮದವರು. ತಂದೆ ಸಾಯಬಣ್ಣ, ತಾಯಿ ಕಾಶೀಬಾಯಿ. ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ನಂತರ ಗುಲಬರ್ಗಾ ವಿ.ವಿ.ಯಿಂದ ಎಂ.ಎ, ಎಂ.ಫಿಲ್ ಹಾಗೂ ಪಿಎಚ್ ಡಿ ಪದವಿ ಪಡೆದರು. ಪ್ರಸ್ತುತ, ಕಲಬುರಗಿಯ ನೂತನ ವಿದ್ಯಾಲಯ ಸಂಸ್ಥೆಯ ಪದವಿ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರು. ಕಲಬುರಗಿ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾರೆ. ಕೃತಿಗಳು: ದೇಗಾಂವದ ತತ್ವಪದಗಳು (ಸಂಪಾದನೆ), ತೃತೀಯ ರತ್ನ (ಮೂಲ ಮಹಾತ್ಮ ಫುಲೆ- ಅನುವಾಧ ಕೃತಿ), ಭೀಮಾ ಕೊರೇಂಗಾಂವ್ ವಿಜಯಸ್ತಂಭ (ಅನುವಾದ), ಗುಲಾಮಗಿರಿ (ಮೂಲ: ಮಹಾತ್ಮ ...
READ MORE