ಸಂಘಟನಾ ಚತುರ ಕೆದಂಬಾಡಿ ರಾಮಗೌಡ ಡಾ. ಪೂವಪ್ಪ ಕಾಣಿಯೂರು ಅವರ ಕೃತಿಯಾಗಿದೆ. “ ಅಖಂಡ ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಹುಟ್ಟಿಕೊಳ್ಳುವ ೧೮೮೫ಕ್ಕಿಂತ ಪೂರ್ವದಲ್ಲಿ ವಸಾಹತುಶಾಹಿ ಬ್ರಿಟೀಷರ ವಿರುದ್ಧ ನಡೆದ ಪ್ರತಿರೋಧಗಳು ಪ್ರಾದೇಶಿಕ ಮಿತಿಯಲ್ಲಿ ಮತ್ತು ರಾಜಪ್ರಭುತ್ವದ ಪ್ರತಿನಿಧಿತ್ವದಲ್ಲಿ ನಡೆದವುಗಳಾಗಿವೆ. ಈ ಹಿನ್ನಲೆಯಲ್ಲಿ ಕೆನರಾ, ಕೊಡಗು ೧೮೩೪-೩೭ರ ಜನತಾ ಬಂಡಾಯ ವಿಶಿಷ್ಟವಾದುದು. ಹದಿಮೂರು ದಿನಗಳ ಕಾಲದ ಮಟ್ಟಿಗಾದರೂ ವಸಾಹತುಶಾಹಿ ಆಡಳಿತ ಮತ್ತು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆದುಕೊಂಡಿದ್ದ ಇಂಗ್ಲೆಂಡಿಗೆ ಬಿಸಿ ಮುಟ್ಟಿಸಿದ ಈ ಜನತಾ ಬಂಡಾಯ ಇತರ ಬಂಡಾಯಕ್ಕಿಂತ ತೀರಾ ಭಿನ್ನವಾದುದು. ಬ್ರಿಟೀಷ್ ಆಡಳಿತವನ್ನು ಸ್ವಾತಂತ್ರ್ಯದ ಅಭಿಲಾಷೆಯಿಂದ ವಿರೋಧಿಸಿ ನಡೆಸಲಾದ ಈ ಬಂಡಾಯಕ್ಕೆ ಚಾರಿತ್ರಿಕವಾದ ಮಹತ್ವವಿದೆ. ಹಾಗಿದ್ದೂ ಇಲ್ಲಿ ಮುಖ್ಯವಾಗಿ ಗೌಡರು ಪ್ರಧಾನ ಪಾತ್ರವಹಿಸಿದ್ದಾರೆ. ಈ ಜನತಾ ಬಂಡಾಯದ ಪ್ರಧಾನ ನಾಯಕತ್ವ ವಹಿಸಿದ ವ್ಯಕ್ತಿ ಸಂಘಟನಾ ಚತುರ ಕೆದಂಬಾಡಿ ರಾಮಗೌಡ. ಈ ಹೋರಾಟದಲ್ಲಿ ಬಲಿದಾನ ಮಾಡಿದ ಮತ್ತು ಸೋಲುಂಡವರ ಕೆಚ್ಚು ಮುಂದೆ ಬ್ರೀಟೀಷರ ವಿರುದ್ಧ ರಾಷ್ಟ್ರಮಟ್ಟದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಕೋಲ್ಮಿಂಚಾಗಿ ಪರಿಣಮಿಸಿತು. ಎಂಬುದು ಪುಸ್ತಕದ ಆಯ್ದ ಭಾಗವಾಗಿದೆ.
ಡಾ.ಪೂವಪ್ಪ ಕಾಣಿಯೂರು ತುಳು ವಿದ್ವಾಂಸರು, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕರು ದೈವಾರಾಧನೆಯ ವಿಚಾರದಲ್ಲಿ ಆಸಕ್ತಿ ಇರುವವರು.ಪ್ರಸ್ತುತ ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ಪ್ರಾಧ್ಯಾಪಕರು. ಕೃತಿಗಳು: ಪೂಕರೆ ಎಂಬ ಜಾನಪಧೀಯ ಲೇಖನಗಳ ಸಂಕಲನ, ಮೌಖಿಕ ಸಂಕಥನ. ತೀಡಿದಷ್ಟು ಗಂಧ. ಉಳ್ಳಾಕುಲು ಐತಿಹಾಸಿಕತೆ ಪ್ರಾದೇಶಿಕತೆ ಮತ್ತು ಆರಾಧನಾ ಸ್ವರೂಪ ಕುಕ್ಕೆಯಲ್ಲಿ ನಾಗರ ಮಡಿಕೆ - ಪ್ರಾದೇಶಿಕ ಅಧ್ಯಯನ ಸಂಪಾದನ ಕೃತಿ ಬಂಗ್ಲೆಗುಡ್ಡೆ ಸಣ್ಣಕ್ಕರ ಬಾಯಿ ಪಾತೆರಾದ ಸಾಹಿತ್ಯೊ . ಸುಳ್ಯ ಪರಿಸರದ ನಂಬಿಕೆಗಳು(೨೦೦೪) ಸಲ್ಲಕ್ಷಣದ ಕೈ- ಕುರುಂಜಿ ವೆಂಕಟರಮಣ ಗೌಡ(೨೦೧೯). ಗೌರವ: ಅಕಾಡೆಮಿ ಸದಸ್ಯತ್ವ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ...
READ MORE