ಸಂಪೂರ್ಣಾನಂದ ಜೀವನಚರಿತ್ರೆ ಪುಸ್ತಕವನ್ನು ಲೇಖಕ ವೆಂ.ಮು. ಜೋಶಿ ಅವರು ರಚಿಸಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು, ಸೆರೆಮನೆಗೆ ಹೋದರು, ಭವಿಷ್ಯದ ಯೋಚನೆ ಮಾಡಿ ಸಮಾಜವಾದವನ್ನು ಆರಿಸಿಕೊಂಡರು. ಸಮಾಜವಾದಿ ಪಕ್ಷದ ನೇತಾರರಲ್ಲಿ ಒಬ್ಬರು. ಚಿಂತನಶೀಲ ರಾಜಕಾರಣಿ ಎಂದು ಸಂಪೂರ್ಣಾನಂದ ಅವರನ್ನು ಇಲ್ಲಿ ವರ್ಣಿಸಲಾಗಿದೆ. ಅವರ ಬಾಲ್ಯ ಜೀವನ, ವಿದ್ಯಾಭ್ಯಾಸ, ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ ಪರಿ, ಸೆರೆಮನೆವಾಸದ ದಿನಗಳು ಹೀಗೆ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ಈ ಕೃತಿಯಲ್ಲಿ ಲೇಖಕರು ಚಿತ್ರಿಸಿದ್ದಾರೆ.
ಲೇಖಕ ಜೋಶಿ ವೆಂ.ಮು. ಅವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು. ಕರ್ನಾಟಕ ರಾಜ್ಯದ ಸಣ್ಣ ಉಳಿತಾಯ ಇಲಾಖೆಯ ಪ್ರಚಾರಕರಾಗಿದ್ದರು. ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ರಚಿಸಿದ್ದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕೃತಿಗಳು; ಚಿನ್ನದ ಪದಕ, ಹೊಸಬೆಳಕು, ಸೈನಿಕ ಉವಾಚ, ಸಮರ ಸೌದಾಮಿನಿ, ಸೆಳೆತದ ಶಿಲುಬೆ. ...
READ MORE