ಸಾಹಿತಿ ಬಿ.ಕೆ. ಬನ್ನಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೀವನ-ಸಾಧನೆ ಕುರಿತು ರಚಿಸಿದ ಕೃತಿ-ಸಮರ್ಥ ಹಾಗೂ ಮಾದರಿ ನಾಯಕ ನರೇಂದ್ರ ಮೋದಿ. ಗುಜರಾತ ಮುಖ್ಯಮಂತ್ರಿಯಾಗಿ ಭಾರತದುದ್ದಕ್ಕೂ ಪ್ರಚಾರ ಪಡೆದಿದ್ದ ನರೇಂದ್ರ ಮೋದಿ, ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದರು. ಭಾರತದ ಪ್ರಧಾನಿಯೂ ಆದರು. ಈವರೆಗಿನ ಸರ್ಕಾರಗಳು ಜನಸಾಮಾನ್ಯರಿಗೆ ಬರೀ ಭರವಸೆಗಳನ್ನು ನೀಡಿ, ವಂಚಿಸುತ್ತಾ ಬಂದಿವೆ. ಹೊಸ ನಿಟ್ಟಿನಲ್ಲಿ ಆಡಳಿತ ನೀಡುವ ಮೂಲಕ ಜನಸಾಮಾನ್ಯರ ಬದುಕು ಸುಧಾರಿಸುವಲ್ಲಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ಸಂಚಲನ ಮೂಡಿಸಿದರು. ಮೋದಿ ಬೆಳೆದು ಬಂದ ಬಗೆ, ರಾಜಕೀಯ ವಲಯದಲ್ಲಿ ಅವರ ಪ್ರಭಾವ, ಪ್ರಧಾನಿಯಾಗಿ ಅವರ ಆಡಳಿತ ಕೌಶಲ ಇತ್ಯಾದಿ ಕುರಿತು ಲೇಖಕರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಬಿ.ಕೆ. ಬನ್ನಪ್ಪ ಅವರು ಯಾದಗಿರಿ ಜಿಲ್ಲೆಯ ಮಾಧ್ವರ ಗ್ರಾಮದವರು. ಗ್ರಂಥಪಾಲಕರಾಗಿ ನಿವೃತ್ತರು. ಕೃತಿಗಳು: ಐಎಎಸ್ ಅಧಿಕಾರಿ ಡಿ.ಕೆ ರವಿ, ಉತ್ತಮ ರಾಜಕಾರಣಿ ಯಾಗಬೇಕಾದರೆ...,,ಅರ್ಥ ಮಾಡಿಕೊಳ್ಳದ ಜೀವನ ವ್ಯರ್ಥ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?,ಭ್ರಷ್ಟಾಚಾರ ಭ್ರಷ್ಟಾಚಾರ.., ಸಮರ್ಥ ಮತ್ತು ಮಾದರಿ ನಾಯಕ ನರೇಂದ್ರ ಮೋದಿ, ಮೋದಿ ಅಲೆ ಏಕೆ, ಜೀವನ ಶಿಕ್ಷಣ ಹಾಗೂ ನೈತಿಕ ಶಿಕ್ಷಣ -ಹೀಗೆ ಒಂಬತ್ತು ಕೃತಿಗಳನ್ನು ಸಮರ್ಪಿಸಿದ್ದಾರೆ. ಪ್ರಶಸ್ತಿ-ಪುರಸ್ಕೃತರು: 1981 ರ ಜನಗಣತಿ ಕಾರ್ಯದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ,ಸೇಡಂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನ್ನಡ ...
READ MORE