ಸಾಮಾನ್ಯರಲ್ಲಿ ಅಸಾಮಾನ್ಯ

Author : ರಾಜಶೇಖರ ಬಿರಾದಾರ

Pages 106

₹ 100.00




Year of Publication: 2021
Published by: ಅರಿವು ಪ್ರಕಾಶನ
Address: ಬೋನ್ಹಾಳ-585290, ಸುರಪುರ ತಾಲೂಕು, ಯಾದಗಿರಿ ಜಿಲ್ಲೆ
Phone: 8861914212

Synopsys

ಲೇಖಕ ಡಾ. ರಾಜಶೇಖರ ಬಿರಾದಾರ ಅವರು 'ಸಾಮಾನ್ಯರಲ್ಲಿ ಅಸಾಮಾನ್ಯ' ಎನ್ನುವ ಶೀರ್ಷಿಕೆ ಅಡಿಯಲ್ಲಿ ದಿ. ಗುಂಡಪ್ಪ ಬಡಿಗೇರ ಅವರ ಕುರಿತು  ಬದುಕಿನ ಬರೆದ ಕೃತಿ ಇದು. ಕನ್ನಡ ವಿಶ್ವವಿದ್ಯಾನಲಯದ ಪ್ರಾಧ್ಯಾಪಕ ಡಾ. ವೀರೇಶ ಬಡಿಗೇರ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಗುಂಡಪ್ಪ ಬಡಿಗೇರ ಅವರು ತಮ್ಮ ಬದುಕಿನ ಎಲ್ಲ ದಾರಿದ್ರ್ಯಗಳನ್ನು ಮೀರಿ, ತಮ್ಮ ಸರಳ ವ್ಯಕ್ತಿತ್ವ, ರಚನಾತ್ಮಕ ನಿರ್ಧಾರಗಳಿಂದ ಭಿನ್ನವಾಗಿ ಬೆಳೆದು, ಒಂದು ಸಮಾಜವಾಗಿ ಬದುಕಿದವರು. ಅವರ ಬದುಕು ನನಗೊಂದು ವಿಸ್ಮಯ ಹಾಗೂ ಬೆರಗು. 'ಎಚ್ಚ ಇದ್ರ ಹುಚ್ಚಿಯೂ ಅಡುಗೆ ಮಾಡುತ್ತಾಳೆ' ಎನ್ನುವುದು ಗಾದೆ. ಎಲ್ಲ ಮಾಹಿತಿಗಳಿದ್ದಾಗ ಬರೆಯುವುದು ಅಗಾಧವೇನಲ್ಲ. ಸಾಹಿತಿಯೂ ಅಲ್ಲದ, ಬರಹಗಾರರೂ ಅಲ್ಲದ, ಯಾವ ರೂಪದ ಲಿಖಿತ ಆಕರಗಳೂ ಇಲ್ಲದ ಗುಂಡಪ್ಪ ಬಡಿಗೇರ ಅವರ ಜೀವನ ಚರಿತ್ರೆಯನ್ನು ಕ್ಷೇತ್ರಕಾರ್ಯ ಆಧರಿಸಿ, ವಿವಿಧೆಡೆ ಚಲ್ಲಿಹೋಗಿದ್ದ ಮಾಹಿತಿಗಳನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ಸೂತ್ರ ರೂಪದಲ್ಲಿ ಕಟ್ಟುವ ಮೂಲಕ, ಮುಳುಗಿ ಹೋಗಬಹುದಾಗಿದ್ದ ಬಹುದೊಡ್ಡ ಸಾಂಸ್ಕತಿಕ ಇತಿಹಾಸವನ್ನೇ ರಾಜಶೇಖರ ಬಿರಾದಾರ ಪುನಾಃರಚಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ. 

About the Author

ರಾಜಶೇಖರ ಬಿರಾದಾರ

ಲೇಖಕ ರಾಜಶೇಖರ ಬಿರದಾರ ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೋನ್ಹಾಳ ಗ್ರಾಮದವರು. ತಂದೆ ಹಣಮಂತ್ರಾಯಗೌಡ ಬಿರಾದಾರ. ತಾಯಿ ಗಂಗಮ್ಮ ಹ. ಬಿರಾದಾರ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪೇಠ ಅಮ್ಮಾಪುರದಲ್ಲಿ ಪ್ರೌಢಶಿಕ್ಷಣ, ಸುರಪುರದ ಪ್ರಭು ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ಬಿ.ಇಡಿ ನಂತರ ಕರ್ನಾಟಕ ವಿ.ವಿ. ಯಿಂದ ಎಂ.ಎ. ಪದವಿ, ತದನಂತರ, ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ. ಪ್ರಸ್ತುತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ  ಯರಗಟ್ಟಿಯ ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.  ಕೃತಿಗಳು : ವಚನ ಸಾಹಿತ್ಯ ಮತ್ತು ...

READ MORE

Related Books