ಸಮಾಜವಾದಿ ಹೋರಾಟಗಾರ ಎಸ್. ಶಿವಪ್ಪ

Author : ನಿಂಬೇಹಳ್ಳಿ ಚಂದ್ರಶೇಖರ್‌

Pages 188

₹ 200.00




Year of Publication: 2021
Published by: ವಿಕಸನ
Address: ವಿಜ್ಞಾತಂ ಭವನ,ಆದಿಚುಂಚನಗಿರಿ ವಿಶ್ವವಿದ್ಯಾನಿಲಯ,ಬಿ.ಜಿ.ನಗರ- 571448, ನಾಗಮಂಗಲ ತಾಲ್ಲೂಕು,ಮಂಡ್ಯ ಜಿಲ್ಲೆ

Synopsys

ಒಕ್ಕಲಿಗ ಸಾಧಕರು ಸರಣಿಯಲ್ಲಿ ಸಮಾಜವಾದಿ ಹೋರಾಟಗಾರ ಎಸ್. ಶಿವಪ್ಪ ಅವರ ಬಗ್ಗೆ ಡಾ. ನಿಂಬೇಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ಪರಿಚಯಾತ್ಮಕ ಕೃತಿ ಸಮಾಜವಾದಿ ಹೋರಾಟಗಾರ ಎಸ್. ಶಿವಪ್ಪ. ಕೃತಿಯ ಬೆನ್ನುಡಿಯಲ್ಲಿ ಬರೆದಿರುವಂತೆ, ಸ್ವಾತಂತ್ರೋತ್ತರ ಭಾರತದಲ್ಲಿ ಜನಪರ ಹೋರಾಟದ ಮೂಲಕ ಸದಾ ಸಕ್ರಿಯರಾಗಿದ್ದು, ಜನಮನದಲ್ಲಿ ಶಾಶ್ವತವಾಗಿ ನೆಲೆಸಿದ ಅನೇಕ ಮಹನೀಯಲಿದ್ದಾರೆ. ಅಧಿಕಾರ ರಾಜಕಾರಣಕ್ಕಿಂತ ಜನರ ಕಲ್ಯಾಣಕ್ಕಾಗಿ ಸದಾ ಹಂಬಲಸಿದ ಮಹನೀಯರಲ್ಲ 'ಸಮಾಜವಾದಿ ಹೋರಾಟಗಾರ ಎಸ್. ಶಿವಪ್ಪ'ನವರೂ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ, ಅಭಿವೃದ್ಧಿ ಹಲಕಾರ, ಕನಸುಗಾರ ಶಿವಪ್ಪನವರು ಅದ್ಭುತ ವಾಲ್ಮೀ, ಪುಸ್ತಕ ಪ್ರೇಮಿಯಾಗಿದ್ದವರು. ವಿರೋಧಪಕ್ಷದ ನಾಯಕರಾಗಿ ಸರ್ಕಾರದ ತಪ್ಪು ಒಪ್ಪುಗಳನ್ನು ರಾಗದ್ವೇಷವಿಲ್ಲದೆ ನಿಷ್ಠುರವಾಗಿ ಒರೆಹಚ್ಚಿ ನೋಡುತ್ತಿದ್ದವರು. ವ್ಯಾಪಾಲಿ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ರಾಜಕೀಯವನ್ನು ಎಂದೂ ಲಾಭದಾಯಕ ವ್ಯಾಪಾರವಾಗಿ ಕಂಡವರಲ್ಲ. ಏಳೆಂಟು ಮುಖ್ಯಮಂತ್ರಿಗಳ ಕಾಲದಲ್ಲಿ ಸುದೀರ್ಘ ರಾಜಕೀಯ ಜೀವನ ನಡೆಸಿದ ಶಿವಪ್ಪನವರು ಸೈದ್ಧಾಂತಿಕ ರಾಜಕಾರಣದ ಬಹುದೊಡ್ಡ ಹೋರಾಟಗಾರ, ಅವರ ಜೀವನ, ಸಾಧನೆಯನ್ನು ಡಾ. ನಿಂಬೇಹಳ್ಳಿ ಚಂದ್ರಶೇಖರ್ 'ಸಮಾಜವಾದಿ ಹೋರಾಟಗಾರ ಎಸ್. ಶಿವಪ್ಪ' ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

About the Author

ನಿಂಬೇಹಳ್ಳಿ ಚಂದ್ರಶೇಖರ್‌
(20 June 1956)

ಡಾ. ಎನ್. ಚಂದ್ರೇಗೌಡ ಅವರ ಹುಟ್ಟೂರು ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ನಿಂಬೇಹಳ್ಳಿ. ತಂದೆ: ನಂಜೇಗೌಡ, ತಾಯಿ: ನಂಜಮ್ಮ. ನಿಂಬೇಹಳ್ಳಿ, ದಿಡಗ, ಹಿರಿಸಾವೆ, ಚನ್ನರಾಯಪಟ್ಟಣ, ತುಮಕೂರು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಎಂ.ಎ., ಪಿಎಚ್.ಡಿ., ಪದವಿ ಪಡೆದರು. ಮುಖ್ಯಶಿಕ್ಷಕ, ಬಿ.ಇ.ಓ., ಬಿ.ಇಡಿ. ಕಾಲೇಜಿನಲ್ಲಿ ಉಪನ್ಯಾಸಕ, ಡಿ.ಡಿ.ಪಿ.ಐ., ಮುಂತಾದ ಹಲವು ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸ್ತುತ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿ. ಇತಿಹಾಸ ಮತ್ತು ಭಾಷಾ ಸಂಶೋಧನಾ ಕಾರ್ಯದಲ್ಲಿ ಆಸಕ್ತಿ, ಸಣ್ಣಕಥೆಗಾರ, ನಾಟಕಕಾರ, ಕಾದಂಬರಿಕಾರ, ಕವಿ. ಕೃತಿಗಳು: ಪ್ರೀತಿಯ ಪರಿವರ್ತನೆ' (ಕಥಾಸಂಕಲನ); 'ಪ್ರೇಮಪೂಜೆ' (ಕವನ ಸಂಕಲನ); ...

READ MORE

Related Books