ರವೀಂದ್ರ ಭಟ್ಟ ಅವರು ನಿರೂಪಣೆ ಮಾಡಿರುವ ಕೃತಿ ಸಹಸ್ತ ಪದಿ. ಈ ಕೃತಿಯು ಪ್ರೊ.ಎಂ.ಕೆ.ಶ್ರೀಧರ ಅವರ ಪ್ರೇರಣಾದಾಯಿ ಜೀವನ ಯಾತ್ರೆಯಾಗಿದೆ. ಈ ಕೃತಿಗೆ ಡಾ.ಕಸ್ತೂರಿರಂಗನ್ ಅವರು ಬೆನ್ನುಡಿ ಬರೆದಿದ್ದು,‘ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆ ಮತ್ತು ಸ್ಥಾಪನೆಯ ಹಿಂದೆ ಶ್ರೀಧರ್ ಅವರ ಪ್ರಧಾನ ಪಾತ್ರ ಇದೆ. ಅವರ ಕ್ರಿಯಾಶೀಲತೆ, ಜನರೊಂದಿಗೆ ಬೆರೆಯುವ ಸ್ವಭಾವ, ಅಂದುಕೊಂಡ ಕೆಲಸ ಮಾಡುವ ಗುಣಗಳೆಲ್ಲ ಜ್ಞಾನ ಆಯೋಗದ ಚಟುವಟಿಕೆಗಳಲ್ಲಿ ಕಂಡು ಬರುತ್ತವೆ. ಪ್ರಸ್ತುತ "ಸಹಸ್ತಪದಿ" ಹೆಸರಿನಲ್ಲಿ ಬರೆದಿರುವ ಅವರ ಜೀವನಗಾಥೆಯು ಒಂದು ಪ್ರೇರಣಾದಾಯಿ ಪುಸ್ತಕ. ಪುಸ್ತಕ ತೆರೆದ ಮೇಲೆ ಕೊನೆಯವರೆಗು ತಾನೆ ತಾನಾಗಿ ಓದಿಸಿಕೊಂಡು ಹೋಗುವ ಪುಸ್ತಕ. ಜೀವನ ಚರಿತ್ರೆಯೆಂದರೆ ಬೇರೆ ಬೇರೆ ವ್ಯಕ್ತಿಗಳ ಮೇಲೆ ಗೂಬೆ ಕೂರಿಸಲು ಮಾಡುವ ಕುಟಿಲೋಪಾಯಗಳು ಎಂದೇ ಬಿಂಬಿತವಾಗಿರುವ ಕಾಲದಲ್ಲಿ ಪ್ರಥಮ ಪುರುಷದಲ್ಲಿ ಪ್ರತಿದಿತವಾಗಿದ್ದರೂ, ವ್ಯಕ್ತಿ ಪ್ರಶಂಸೆಗೆ ಇಲ್ಲಿ ಸ್ಥಳವಿಲ್ಲ. ಹಾಗೆಯೇ ನಿಂದನೆಗೂ ಆಸ್ಪದವಿಲ್ಲವಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ’ ಎಂದಿದ್ದಾರೆ.
ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...
READ MORE