‘ಸಾಧಕಚೇತನ ಎ.ಜಿ. ಬಂದೀಗೌಡ’ ಕೃತಿಯು ಎಸ್. ಶಿವರಾಮು ಅವರ ಒಕ್ಕಲಿಗ ಸಾಧಕರು ಮಾಲಿಕೆಯ ವ್ಯಕ್ತಿ ಪರಿಚಯ ಕೃತಿಯಾಗಿದೆ. ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಲು ಹೀಗಿವೆ : ರಾಜ್ಯಾಂಗ ರಚನಾಸಭೆಯ ಸದಸ್ಯರಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಎ.ಟಿ. ಬಂದೀಗೌಡರು ಮೂಲತಃ ಸ್ವಾತಂತ್ರ್ಯ ಹೋರಾಟಗಾರರು: 'ಮೈಸೂರು ಚಲೋ' ಸತ್ಯಾಗ್ರಹದಲ್ಲಿ ಭಾಗವಹಿಸಿದವರು. ಅವರು ನುಡಿದಂತೆ ನಡೆದವರು, ನಡೆದಂತೆ ನುಡಿದವರು: ಮಂಡ್ಯ ಜಿಲ್ಲೆಯ ಹೆದ್ದಾಳುಗಳಾದ ಎಚ್. ಕೆ. ವೀರಣ್ಣಗೌಡ, ಕೆ. ವಿ. ಶಂಕರಗೌಡ, ಸಿಂಗಾರಿಗೌಡ ಮುಂತಾದ ಹಿರಿಯ ನಾಯಕರ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಅವರದು. ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಶ್ರಮಿಸಿದವರು. ರೈತರ ಏಳಿಗೆಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಜನರ ವಿಶ್ವಾಸಗಳಿಸಿದ್ದರು. ಸರಳ ಜೀವನ ಅವರ ಬದುಕಿನ ಮೂಲಮಂತ್ರವಾಗಿತ್ತು. ಉತ್ತಮ ಸಂಸದೀಯ ಪಟುವಾಗಿದ್ದ ಅವರು ಸೌಜನ್ಯದ ನಡವಳಿಕೆಗೂ ಹೆಸರಾಗಿದ್ದರು. ನಾಡು, ನುಡಿ, ಸಂಸ್ಕೃತಿ ಪ್ರೇಮಿಯಾಗಿದ್ದ ಎ.ಜಿ. ಬಂದೀಗೌಡರ ಜೀವನ ಸಾಧನೆ ಕುರಿತು 'ಸಾಧಕಚೇತನ ಎ.ಜಿ. ಬಂದೀಗೌಡ' ಕೃತಿಯಾಗಿದೆ ಎಂದಿದೆ.
ಲೇಖಕ ಎಸ್. ಶಿವರಾಮು ಅವರು ಮೂಲತಃ ಮಂಡ್ಯ ಜಿಲ್ಲೆಯ ಆಲಕೆರೆ ಗ್ರಾಮದವರು. ಆಲಕೆರೆ, ಕೀಲಾರ. ಮಂಡ್ಯ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿರುತ್ತಾರೆ. ಇತಿಹಾಸದಲ್ಲಿ ಎಂ.ಎ ಪದವೀಧರರು. ನವದೆಹಲಿಯ ಇತಿಹಾಸ ಅನುಸಂಧಾನ ಪರಿಷತ್ತಿನ ಶಿಷ್ಯವೇತನ ಪಡೆದು ‘ಕೆ.ವಿ.ಶಂಕರಗೌಡರ ಜೀವನ, ಸಾಧನೆ’ ಕುರಿತ ಪ್ರೌಢಪ್ರಬಂಧ ಸಲ್ಲಿ (2004) ಪಿ.ಹೆಚ್.ಡಿ ಪಡೆದಿದ್ದಾರೆ. ಕೆ.ಪಿ.ಎಸ್.ಸಿ ಯಿಂದ (2009) ಇತಿಹಾಸ ಅಧ್ಯಾಪಕರಾಗಿ ನೇಮಕವಾದರು. ಪ್ರಸ್ತುತ, ಸರ್ಕಾರಿ ಕಾಲೇಜು, ಮಂಡ್ಯದಲ್ಲಿ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಕೃತಿಗಳು : ಜನಸಾಮಾನ್ಯರ ವೈದ್ಯ ಡಾ.ಸಿ. ಬಂದೀಗೌಡ, ‘ಸಾಧಕಚೇತನ ಎ.ಜಿ. ಬಂದೀಗೌಡ’ ...
READ MORE