ಇಂಡಿ ತಾಲೂಕು ಖೇಡಗಿ ಮೂಲದ ಹಾಗೂ ವಿಜಯಪುರದ ನಿವಾಸಿಯಾಗಿರುವ ರಂಗ ಕಲಾವಿದ, ನಾಟಕಕಾರ ಎಸ್. ಎಮ್. ಖೇಡಗಿ ಅವರು 50ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. 'ಗಂಗೆ ಹೋದಳು ಗೌರಿ ಬಂದಳು' ಅವರ ಪ್ರಸಿದ್ಧ ನಾಟಕ. ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಭಕ್ತಿಪ್ರಧಾನ ನಾಟಕಗಳಲ್ಲದೆ ಮಕ್ಕಳ ನಾಟಕಗಳನ್ನು ಬರೆದಿರುವ ಅವರ ಬದುಕು ಮತ್ತು ಬರೆಹಗಳನ್ನು ಪರಿಚಯಿಸುತ್ತಾ, ಅವರ ನಾಟಕಗಳು ಮಾನವ ತಲ್ಲಣಗಳಿಗೆ ಸ್ಪಂದಿಸುವ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.
ಲೇಖಕ, ಸಂಶೋಧಕ ಎ. ಎಲ್.ನಾಗೂರ ಅವರು ಹುಟ್ಟಿದ್ದು 1966ರಲ್ಲಿ. ಕನ್ನಡ ಉಪನ್ಯಾಸಕರು. ಸಂಶೋಧಕರು. ರಂಗಭೂಮಿ ಕಂಪನಿ ಮತ್ತು ಕಲಾವಿದರ ಕುರಿತ ಸಂಶೋಧನೆ, ಇತಿಹಾಸಿಕ ಸ್ಮಾರಕ, ಶಿಲ್ಪಗಳ ಕುರಿತು ಸಂಶೋಧನೆ, ದೇಶಗತಿ ಮನೆತನಗಳ ಕುರಿತು ಸಂಶೋಧನೆ ಅಲ್ಲದೆ, ಈವರೆಗೆ ಒಟ್ಟು 12 ಕನ್ನಡ, ಸಂಸ್ಕೃತ,ಪರ್ಷಿಯನ್, ಅರೇಬಿಕ್ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಕಳೆದ 36 ವರ್ಷಗಳಿಂದ ಕವಿತೆ, ಲೇಖನಗಳ ಬರೆವಣಿಗೆ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭ ಪುರವಣಿಯಲ್ಲಿ ವಿಶೇಷ ಲೇಖನಗಳು ಪ್ರಕಟಗೊಂಡಿವೆ. 2012ರಲ್ಲಿ ಚಂದನ ದೂರದರ್ಶನದ 'ಬೆಳಗು' ಕಾರ್ಯಕ್ರಮದಲ್ಲಿ ಸಂದರ್ಶನ ಪ್ರಸಾರಗೊಂಡಿದ್ದು 2017ರಲ್ಲಿ ಕರ್ನಾಟಕ ಸರಕಾರದಿಂದ ' ರಾಜ್ಯ ಉತ್ತಮ ...
READ MORE