ರುಮಾಲೆ ಚೆನ್ನಬಸವಯ್ಯ

Author : ಕೆ.ಎಸ್. ಶ್ರೀನಿವಾಸಮೂರ್ತಿ

Pages 32

₹ 6.00




Year of Publication: 1990
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕರ್ನಾಟಕ ಲಲಿತಕಲಾ ಅಕಾಡೆಮಿ 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002

Synopsys

ಬರಹಗಾರರಾದ ಕೆ. ಎಸ್. ಶ್ರೀನಿವಾಸ ಮೂರ್ತಿ  ಅವರು ಬರೆದಿರುವ ’ ರುಮಾಲೆ ಚೆನ್ನಬಸವಯ್ಯ’ ಪುಸ್ತಕವು ಕರ್ನಾಟಕ ಲಲಿತಕಲಾ ಅಕಾಡೆಮಿಯ ’ಕರ್ನಾಟಕ ಕಲಾವಿದರ ಮಾಲೆ’ ಸರಣಿಯಲ್ಲಿ ಪ್ರಕಟಗೊಂಡಿದೆ.

ರುಮಾಲೆ ಚೆನ್ನಬಸವಯ್ಯ ಅವರು ಅಖಿಲ ಭಾರತ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದ ಅಪರೂಪದ ಚಿತ್ರಕಾರ.  ಇವರು ಜಲವರ್ಣ ಹಾಗೂ ತೈಲವರ್ಣ ಮಾಧ್ಯಮಗಳಲ್ಲಿ  ಪ್ರಕೃತಿಯ ಸೊಬಗನ್ನು ನೂರಾರು ಕಲಾಕೃತಿಗಳ ಮೂಲಕ ಹೊರತಂದಿದ್ಧಾರೆ.  ಸ್ವಾತಂತ್ಯ್ರ ಪೂರ್ವ ಮತ್ತು ಸ್ವಾತಂತ್ಯ್ರೋತ್ತರ ಭಾರತದ ರಾಜಕೀಯ ಮತ್ತು ಸಾಮಾಜಿಕ ಏಳುಬೀಳುಗಳಲ್ಲಿ ಸಕ್ರಿಯರಾಗಿದ್ದಸ ವ್ಯಕ್ತಿ.

ಅಪೂರ್ವ ಕಲಾವಿದರಾದ ರುಮಾಲೆ ಕಲೆ, ಪ್ರಕೃತಿಗಳನ್ನು, ಆಧ್ಯಾತ್ಮಿಕ ಒಲವಿನತ್ತ ಸಹಜವಾಗಿ ತೆರೆದುಕೊಳ್ಳುವ ವ್ಯಕ್ತಿತ್ವದವರು. ಮೂಲಭೂತವಾಗಿ ಇವರೊಬ್ಬ ಪ್ರಕೃತಿ ಚಿತ್ರಕಾರರಾಗಿದ್ದು ಇವರ ಅನೇಕ ಚಿತ್ರಕಲಾಕೃತಿಯನ್ನು ಇವರ ಜೀವನ ವ್ಯಕ್ತಿತ್ವದ ಜೊತೆಗೆ ಕಲಾವ್ಯಕ್ತಿತ್ವವನ್ನೂ ಸಹ ಪರಿಚಯಿಸಿಕೊಡುವ ಪುಸ್ತಕ  ಇದಾಗಿದೆ.

 

About the Author

ಕೆ.ಎಸ್. ಶ್ರೀನಿವಾಸಮೂರ್ತಿ

ಕೆ. ಎಸ್. ಶ್ರೀನಿವಾಸ ಮೂರ್ತಿ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಅವರ ಕೆಲವು ಕವನಗಳು 'ಶೂದ್ರ', 'ಸಂಕ್ರಮಣ' ಮುಂತಾದ ಸಾಹಿತ್ಯಕ ಪತ್ರಿಕೆಗಳಲ್ಲಿ ಮತ್ತು “ಕ್ರಿಸ್ತಾಂಜಲಿ', 'ಅಂಕಣ ಕಾವ್ಯಾಂಕ', 'ಯುವಭಾರತಿ' 1973 ಮತ್ತು 1975, ಬೆಂಗಳೂರು ವಿಶ್ವವಿದ್ಯಾಲಯ) ಮುಂತಾದ ಕವನ ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಕನ್ನಡದ ಕಲಾಸಾಹಿತ್ಯದ ದೃಷ್ಟಿಯಿಂದ ಅವರ ಕೆಲವು ಲೇಖನಗಳು ವಿಶೇಷವಾದ ಭರವಸೆಯನ್ನು ಹುಟ್ಟಿಸಿವೆ. ಶಾಬ್ಲಿಕ ಮಾಧ್ಯಮದಲ್ಲಿ ದೃಶ್ಯ ಮಾಧ್ಯಮ' (ಅಂಕಣ') 'ಪುಷ್ಪಮಾಲ ಅವರ ಕಲೆ' (ಶೂದ್ರ), (ರುಮಾಲೆ ಅವರ ಪ್ರಕೃತಿ ಚಿತ್ರಗಳು' (ಅಂಕಣ) ಮುಂತಾದ ಕೆಲವು ಲೇಖನಗಳ ಜೊತೆಗೆ ತರುಣ ...

READ MORE

Related Books