`ರುಧಿರಾಭಿಷೇಕ ಬಾಘಾ ಜತೀನ್ ಜೀವನ ಮತ್ತು ಕಾಲ' ಈ ಕೃತಿಯು ಜೀವನ ಚಿತ್ರಣವಾಗಿದೆ. ಲೇಖಕ ಬಾಬು ಕೃಷ್ಣಮೂರ್ತಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 1890 ರಿಂದ 1915ರವರೆಗಿನ ಮೂರೂವರೆ ದಶಕಗಳು ಒಂದು ಮಹತ್ತ್ವದ ಅಧ್ಯಾಯ. ಆ ಅವಧಿಯಲ್ಲಿ ಭಾರತದಲ್ಲಿ ಕಂಗೊಳಿಸಿದ, ರೂಪುಗೊಂಡ ಕ್ರಾಂತಿಕಾರಿ ಸರಣಿ ಜಗತ್ತಿನ ಇತಿಹಾಸದಲ್ಲೇ ಅನುಪಮ. ನಿಸ್ತೇಜಗೊಂಡಿದ್ದ ಜನಮಾನಸದಲ್ಲಿ ಹೋರಾಟದ ಕಿಚ್ಚು ಪ್ರಜ್ವಲಗೊಂಡದ್ದು ಆ ಕಾಲಖಂಡದಲ್ಲಿ. ಆ ವಿಪ್ಲವ ಯುಗದ ಕ್ರಾಂತಿಕಾರಿಗಳ ಪ್ರಾತಿನಿಧಿಕ ರೂಪ – ಈ ಗ್ರಂಥದ ಕಥಾನಾಯಕ ಬಾಘಾ ಜತೀನ್ ಅಥವಾ ಜತೀಂದ್ರನಾಥ ಮುಖೋಪಾಧ್ಯಾಯ. ಬಂಕಿಮಚಂದ್ರ-ವಿವೇಕಾನಂದರ ಸ್ಫೂರ್ತಿ, ಲೋಕಮಾನ್ಯ ತಿಲಕ್-ಲಜಪತರಾಯ್-ಬಿಪಿನ್‌ಚಂದ್ರ ಪಾಲ್‌ರಿಂದ ಪ್ರೇರಣೆ, ನಿವೇದಿತಾ-ಅರವಿಂದರಿಂದ ಮಾರ್ಗದರ್ಶನ – ಇವು ಮುಪ್ಪುರಿಗೊಂಡು ಸಾಕಾರಗೊಂಡ ಕ್ರಾಂತಿರತ್ನ, ಬಾಘಾ ಜತೀನ್. ಜತೀನ್ ಮುಖರ್ಜಿಯ ಸಾಹಸಮಯ ಜೀವನ, ಬಲಿದಾನಗಳನ್ನು ಕೇಂದ್ರವಾಗಿರಿಸಿಕೊಂಡ ಆ ರಕ್ತತರ್ಪಣ ಪರ್ವದ ರೋಮಾಂಚಕಾರಿ ಕಥನವೇ ‘ರುಧಿರಾಭಿಷೇಕ’. ಬಹುಮಟ್ಟಿಗೆ ಅಪರಿಚಿತರಾಗಿಯೆ ಉಳಿದಿರುವ ಬ್ರಹ್ಮಬಾಂಧವ ಉಪಾಧ್ಯಾಯ, ಮಾಸ್ಟರ್ ಅಮೀರ್‌ಚಂದ್, ಕರ್ತಾರಸಿಂಗ್ ಸರಾಬಾ, ಅವಧ ಬಿಹಾರಿ, ಸ್ವಾಮಿ ಪ್ರಜ್ಞಾನಂದ ಸರಸ್ವತಿ ಮೊದಲಾದ ಹತ್ತಾರು ವ್ಯಕ್ತಿಗಳನ್ನು ಇಲ್ಲಿ ಮೊಟ್ಟಮೊದಲ ಬಾರಿಗೆ ವಿಸ್ತೃತವಾಗಿ ಪರಿಚಯಿಸಲಾಗಿದೆ.
ಸಾಹಿತ್ಯ, ಪತ್ರಿಕೋದ್ಯಮ ಎರಡು ಕ್ಷೇತ್ರಗಳಲ್ಲೂ ಚಿರಪರಿಚಿತರಾದ ಬಾಬು ಕೃಷ್ಣಮೂರ್ತಿ ಹುಟ್ಟಿದ್ದು ಬೆಂಗಳೂರು. ಸಾಹಿತ್ಯ ಹಾಗೂ ಪತ್ರಿಕೋದ್ಯಮದಲ್ಲಿ ಅತೀವ ಆಸಕ್ತಿ. ಅವರ ಸಂಪಾದಕತ್ವದಲ್ಲಿ ಬಾಲಮಂಗಳ (ಪಾಕ್ಷಿಕ), ಬಾಲಮಂಗಳ ಚಿತ್ರಕಥಾ (ಮಕ್ಕಳ ವ್ಯಂಗ್ಯ ಚಿತ್ರ ಪಾಕ್ಷಿಕ), ಗಿಳಿವಿಂಡು (ಶಿಶು ಪಾಕ್ಷಿಕ ಪತ್ರಿಕೆ) ಪ್ರಕಟವಾಗಿವೆ. ಇವರು ರಚಿಸಿದ ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’. ಅವರ ಪ್ರಮುಖ ಕೃತಿಗಳು - ಅಜೇಯ (1974), ಸಿಡಿಮದ್ದು ನೆತ್ತರು ನೇಣುಗಂಬ (1984), ಅದಮ್ಯ (1984), ರುಧಿರಾಭಿಷೇಕ (2005), ಡಾ. ಸಿ.ಜಿ. ಶಾಸ್ತಿಒಂದು ಯಶೋಗಾಥೆ (2007), 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ (2007), ...
READ MORE