ಪತ್ರಕರ್ತ ಹಾಗೂ ಲೇಖಕ ರವಿ ಬೆಳಗೆರೆ ಅವರ ಕೃತಿ-ರೇಖಾ ಅಂತರಂಗ ಹೇಗಿದೆ ಗೊತ್ತೆ?. ಹಿಂದಿ ಚಲನಚಿತ್ರ ನಟಿ ರೇಖಾ ಅವರು ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ ಹೆಸರು. ಕಲಾತ್ಮಕ ಹಾಗೂ ವಾಣಿಜ್ಯ ಚಲನಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ತಮ್ಮ ಕಲಾತ್ಮಕ ಅಭಿನಯದ ಮೂಲಕ ಅಸಂಖ್ಯ ಅಭಿಮಾನಿಗಳನ್ನು ಹೊಂದಿದವರು. ಅವರ ವೈಯಕ್ತಿಕ ಬದುಕು ಹಾಗೂ ರಂಗುರಂಗಿನ ಬದುಕು ಮತ್ತು ಅವರ ಸಾಧನೆಯ ಎತ್ತರಗಳನ್ನು, ಅವರ ನಟನೆಯ ಅಪರೂಪದ ಪರಿಗಳನ್ನು ಚಿತ್ರಿಸಿರುವ ಕೃತಿ ಇದು. ಇವರ ಬಗ್ಗೆ ಎಷ್ಟೊಂದು ಗಾಸಿಪ್ ಗಳಿದ್ದರೂ ಹೆದರದೇ ಬದುಕು ಗಟ್ಟಿಯಾಗಿಸುವತ್ತ ರೇಖಾ ತೋರುತ್ತಿರುವ ಅಸಾಧಾರಣ ವ್ಯಕ್ತಿತ್ವದ ಪರಿಚಯವನ್ನು ಈ ಕೃತಿ ಕಟ್ಟಿಕೊಡುತ್ತದೆ.
ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...
READ MORE