ಮೈಸೂರು ವಿಶ್ವವಿದ್ಯಾಲಯದ ಗ್ರಂಥಮಾಲೆಯಡಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರ ಕೃತಿ ‘ರವೀಂದರನಾಥ ಠಾಕೂರರು’ ಪ್ರಕಟಗೊಂಡಿದ್ದು, ಹಿರಿಯ ಸಾಹಿತಿ ಬಿ.ಎಂ. ಶ್ರೀಕಂಠಯ್ಯನವರು ಸಂಪಾದಿಸಿದ್ದಾರೆ. ರವೀಂದ್ರರ ಕಾಲ-ದೇಶ-ಭಾಷೆ, ಜೀವನ ಚರಿತ್ರೆ, ಕಾವ್ಯಗಳು, ಕಥೆಗಳು, ನಾಟಕಗಳು, ಭಾಷಣ-ಲೇಖನಗಳು, ಇತರೆ ಕಾರ್ಯ ಕಲಾಪಗಳು, ಸಂಪಾದನೆ, ಮಂಗಳಾಚರಣ ಹೀಗೆ ಮುಖ್ಯ ಶೀರ್ಷಿಕೆಗಳಡಿ ಹತ್ತು ಹಲವು ಉಪಶೀರ್ಷಿಕೆಗಳಡಿ ವಿಷಯದ ವಿವರಣೆಯನ್ನು ಕೃತಿ ಒಳಗೊಂಡಿದೆ.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE