ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ರವೀಂದ್ರನಾಥರ ಜೀವನ ಗಾಥೆ ಕುರಿತು ಬರೆದ ಕೃತಿ ಇದು. ರವೀಂದ್ರನಾಥರ ಕಾಲ ದೇಶ, ಭಾಷೆ, ಮೊದಲ ಪಾಠಗಳು, ಮೊದಲ ಕವನಗಳು, ಕಾವ್ಯಗಳ ವಿಶ್ಲೇಷಣೆ, ಕಥೆಗಳ ವಿಶ್ಲೇಷಣೆ, ನಾಟಕಗಳು, ಭಾಷಣಗಳು, ಇತರೆ ಕಾರ್ಯ ಕಲಾಪಗಳು, ರವೀಂದ್ರನಾಥರ ಬರೆಹಗಳು ಹೀಗೆ ರವೀಂದ್ರನಾಥರ ಸಾಹಿತ್ಯವನ್ನು ಅವರ ಜೀವನದೊಂದಿಗೆ ತಳಕು ಹಾಕಿ, ವಂಗ ದೇಶ, ಭಾಷೆಯನ್ನೂ ಸಹ ಸುಂದರವಾಗಿ ಚಿತ್ರಿಸಿದ ಕೃತಿ ಇದು.
‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕನ್ನಡ ಸಣ್ಣಕತೆಗಳ ರಚನೆಗೆ ಖಚಿತ ರೂಪ ನೀಡುವುದಕ್ಕೆ ಕಾರಣರಾದ ಆದ್ಯರು. ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ 1891ರ ಜೂನ್ 8ರಂದು ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲ್ಲಮ್ಮ. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿ (1914) ಪಡೆದರು. ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ (1914) ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ...
READ MORE