ರವಿದಾಸ್ ಜೀವನಚರಿತ್ರೆ ಪುಸ್ತಕವನ್ನು ಲೇಖಕಿ ಎಸ್.ಜಿ. ಶ್ರೀಮತಿ ಅವರು ರಚಿಸಿದ್ದಾರೆ. ಹದಿನೈದನೆಯ ಶತಮಾನದ ಸಂತರು ದಾನಿಗಳೆಂದೂ, ದೈವಭಕ್ತರೆಂದೂ ಎಲ್ಲ ಗೌರವವನ್ನು ಪಡೆದರು. ಐಶ್ವರ್ಯ, ಸುಖ ಎಲ್ಲವನ್ನೂ ದೂರವಿಟ್ಟು ಸರಳ ಜೀವನ ನಡೆಸಿದರು. ಸಮಾಜ ಸುಧಾರಕರು ಎಂದು ರವಿದಾಸ್ ಅವರ ಕುರಿತಾಗಿ ಇಲ್ಲಿ ವಿವರಿಸಲಾಗಿದೆ. ಇಲ್ಲಿ ಅವರ ಬಾಲ್ಯ ಜೀವನ, ದೈವಭಕ್ತಿ, ಸರಳ ಜೀವನ ನಡೆಸಿದ ರೀತಿ, ಜನಸಮಾನ್ಯರೊಂದಿಗೆಗಿನ ಅವಿನಾಭಾವ ಸಂಬಂಧ ಹೀಗೆ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ಲೇಖಕಿ ಚಿತ್ರಿಸಿದ್ದಾರೆ.
ಶ್ರೀಮತಿ ಎಸ್.ಜಿ ಅವರು ಮೂಲತಃ ಮೈಸೂರಿನವರು. ಬಿ.ಎಸ್ಸಿ., ಹಿಂದಿ ಪ್ರವೀಣ್ ಪದವೀಧರರು. 15-07-1950 ರಂದು ಜನಿಸಿದರು. ತಂದೆ ಎಸ್.ಕೆ. ಗುರುಡಾಚಾರ್, ತಾಯಿ- ಪದ್ಮಮ್ಮ. ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಶ್ರೀ ಕೃಷ್ಣ ಚೈತನ್ಯ (1976), ರಾಮದಾಸ (1980) ರಚಿಸಿದ್ದಾರೆ. ...
READ MORE