ಕಳೆದ ನಲವತ್ತೆರಡು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಮನೆ ಬಿಟ್ಟು ಬದುಕುವ ದಾರಿ ಹುಡುಕಿಕೊಂಡು ಬಂದು ರಂಗಭೂಮಿ ಸೇರಿದ ಶ್ರೀಧರ ಅವರು ರಂಗದೀಕ್ಷೆ ತೊಟ್ಟು ಸಾಧಿಸಿದ್ದು ಅಪಾರ. ನಟ, ನಿರ್ದೇಶಕ, ಮಾಲೀಕ, ಸಂಚಾಲಕರಾಗಿ ನಿಷ್ಠೆಯಿಂದ ದುಡಿಯುತ್ತ ರಂಗಾಸಕ್ತರು ಅಭಿಮಾನ ಪಡುವಂತೆ ಬೆಳೆದವರು. ಇವರ ಕುರಿತು ಲೇಖಕ ಗವಿಶ ಹಿರೇಮಠ ಅವರು ಬರೆದಿದ್ದಾರೆ.
ಲೇಖಕ ಗವೀಶ ಹಿಮಠ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಬಿಸರಹಳ್ಳಿ ಗ್ರಾಮದವರು. ಪುರಾಣ ಪ್ರವಚನಕಾರ ವೀರಭದ್ರಯ್ಯ-ಪಾರ್ವತಮ್ಮ ದಂಪತಿಯ ಪುತ್ರರು. 08.09.1946 ರಂದು ಜನನ. ಓದಿದ್ದು ಕೊಪ್ಪಳ, ಧಾರವಾಡದಲ್ಲಿ. ಗುಲ್ಬರ್ಗ ವಿ.ವಿ. ಯ ಗ್ರಂಥಾಲಯದ ಪ್ರ.ಸಹಾಯಕರಾಗಿ ನಿವೃತ್ತರಾಗಿದ್ದರು. ಕಳೆದ 50 ವರ್ಷಗಳಿಂದ ಕಲಬುರಗಿಯಲ್ಲೇ ವಾಸವಾಗಿದ್ದರು. ಜಾಗತೀಕರಣ ಮತ್ತು ಜಾನಪದ. ಡಾ.ಬಿ.ಎಸ್. ಗದ್ದಗಿಮಠ: ಬದುಕು ಬರಹ. ರಂಗಭೂಮಿ ಜೀವ-ಜೀವಾಳ ಶ್ರೀಧರ ಹೆಗಡೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ರಂಗಕನಸುಗಳು (1989-90) ಹಾಗೂ ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ರಂಗಾಂತರಂಗ ((2003-04) ಶೀರ್ಷಿಕೆಗಳಡಿ ರಂಗಭೂಮಿ ಕುರಿತು ಅಂಕಣಗಳನ್ನು ಬರೆದು ರಂಗಕರ್ಮಿಗಳನ್ನು ಪರಿಚಯಿಸಿದರು. ಇವರ ಕಲಾವಿದರು ನಡೆದು ಬಂದ ...
READ MORE