ಲೇಖಕ ರಮೇಶ ಎಸ್. ಕತ್ತಿ ಅವರ ಕೃತಿ- ‘ರಂಗ ಪರಿಚಾರಕ ಗಂಗಾಧರಪ್ಪ ಉಪ್ಪಿನ’. ಗಂಗಾಧರಪ್ಪ ಉಪ್ಪಿನ ಅವರ ಜೀವನ ಮತ್ತು ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ಶ್ರೀಶೈಲ ನಾಗರಾಳ, ತಮ್ಮ ಚಿಂತನೆ, ಬರಹಗಳ ಮೂಲಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸಂಬಂಧದ ತಾತ್ವಿಕ ನೆಲೆಗಟ್ಟನ್ನು ರೂಪಿಸಿಕೊಂಡ ಹೊಸ ತಲೆಮಾರಿನ ಲೇಖಕರಲ್ಲಿ ಡಾ. ರಮೇಶ ಕತ್ತಿಯವರು ಎದ್ದು ಕಾಣುತ್ತಾರೆ. ರಮೇಶ ಅವರ ಬರವಣಿಗೆಯಲ್ಲಿ ಕಾಣಬಹುದಾದ ಇನ್ನೊಂದು ವಿಶಿಷ್ಟ ಗುಣವೆಂದರೆ, ಅವರು ಕನ್ನಡದಲ್ಲಿ ನಡೆದಿರುವ ಅದು ಶಿಷ್ಟ ಹಾಗೂ ಮೌಖಿಕ ವಿಚಾರಗಳ ಗಂಭೀರತೆ. ಇವೆರಡನ್ನೂ ತಮ್ಮ ಬರಹಗಳಲ್ಲಿ ಹದಕ್ಕೆ ತಂದುಕೊಡುತ್ತಾರೆ ಎನ್ನುವ ಕಾರಣಕ್ಕೆ ಅವರು ಒಬ್ಬ ಗಮನಾರ್ಹ ಲೇಖಕರೆನಿಸುತ್ತಾರೆ. ಪ್ರಸ್ತುತ ಡಾ. ರಮೇಶ ಅವರು ರಂಗಪರಿಚಾರಕ ಗಂಗಾಧರಪ್ಪ ಉಪ್ಪಿನ ಗ್ರಂಥವನ್ನು ಉತ್ತರ ಕರ್ನಾಟಕದಲ್ಲೆಲ್ಲಾ ತುಂಬಾ ಪ್ರಸಿದ್ದಿ ಹೊಂದಿದ ನಾಟಕ ಸಾರ್ವಭೌಮರೆಂಬ ಕೀರ್ತಿಗೆ ಪಾತ್ರರಾದ ಆಲಮೇಲದ ಶ್ರೀ ಗಂಗಾಧರ ಉಪ್ಪಿನ ಅವರ ಬದುಕಿನ ಹಂದರವನ್ನು ಹೊಂದಿದೆ. ಶ್ರೀಯುತರ ಬದುಕು, ಕಲೆ, ಸಾಹಿತ್ಯ, ಜೀವನಾದರ್ಶಗಳನ್ನು ತುಂಬಾ ಸರಳ ಸುಂದರವಾಗಿ ತಿಳಿಯಾಗಿ ಕುಸುರಿಗೊಳಿಸಿದ್ದಾರೆ. ಎಲ್ಲಿಯೂ ಉತ್ಪ್ರೇಕ್ಷದ ಅಪಾಯವನ್ನು ಈ ಕೃತಿ ಹೊಂದಿಲ್ಲದಿರುವುದು ಹೆಗ್ಗಳಿಕೆಯಾಗಿದೆ’ ಎಂದು ಪ್ರಶಂಸಿಸಿದ್ದಾರೆ.
ಡಾ. ರಮೇಶ ಎಸ್. ಕತ್ತಿ ಅವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಡಣಿ ಗ್ರಾಮದವರು. ಅಪ್ಪ: ಸಿದ್ದಣ್ಣ ಅವ್ವ: ಮಹಾದೇವಿ. (ಜನನ: 28.08.1978 ). ಕಡಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಸಿಂದಗಿಯಲ್ಲಿ ಬಿ.ಎ. ಪದವಿ, ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿ.ವಿ.ಯಿಂದ ಎಂ.ಎ, ಹಾಗೂ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಬಿ.ಇಡಿ, ಪದವೀಧರರು. ಸಿಂದಗಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ಹವ್ಯಾಸಿ ಪತ್ರಕರ್ತರು. ಅವಿಭಜಿತ ಸಿಂದಗಿ ತಾಲೂಕಿನ ಆಲಮೇಲದಲ್ಲಿ (ಈಗ ತಾಲೂಕು ಕೇಂದ್ರ) ವಾಸವಾಗಿದ್ದು, ‘ವಿಜಯಪುರ ಜಿಲ್ಲೆಯ ಸಣ್ಣ ಕತೆಗಳು’ ವಿಷಯವಾಗಿ ಗುಲಬರ್ಗಾ ವಿ.ವಿ. ಯಲ್ಲಿ ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಎಚ್ ಡಿ ದೊರೆತಿದೆ. ಕೃತಿಗಳು : ಕಾಮಸ್ವರ್ಗದ ಹಾದಿ ಹಿಡಿದು, ಏನನ್ನೂ ಹೇಳುವುದಿಲ್ಲ (ಕವನ ಸಂಕಲನಗಳು),, ...
READ MORE