ತಿಳಿಗನ್ನಡದಲ್ಲಿ ಕತೆ, ಕಾದಂಬರಿ, ಲೇಖನ ಹಾಗೂ ಜೀವನ ಚರಿತ್ರೆಯನ್ನು ಬರೆದ ಆರ್. ಕಲ್ಯಾಣಮ್ಮ ಅವರು 1933ರಲ್ಲಿ ಸರ್ಕಾರದಿಂದ ಬೆಂಚ್ ಮ್ಯಾಜಿಸ್ಟ್ರೇಟ್ ಅಥವಾ ಗೌರವ ನ್ಯಾಯಾಧೀಶರಾಗಿ ಆಯ್ಕೆಗೊಂಡ ಪ್ರಥಮ ಮಹಿಳೆಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈ ಅವಧಿಯನ್ನು ‘ಕಲ್ಯಾಣಮ್ಮನ ಕೋರ್ಟ್’ ಎಂದೇ ಖ್ಯಾತಿ ಪಡೆದಿದೆ.
ಶಾರದಾ ಸದನ, ಶಾರದಾ ಸ್ತ್ರೀ ಸಮಾಜವನ್ನು ಕಟ್ಟಿ ಬೆಳೆಸಿದ ಕಲ್ಯಾಣಮ್ಮ ಅವರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸರಸ್ವತಿ ಎನ್ನುವ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡಿದರು. ರಾಷ್ಟ್ರೀಯ ದಾಖಲೆಯಾಗಿರುವ ಅಖಿಲ ಕರ್ನಾಟಕ ಮಕ್ಕಳ ಕೂಟವನ್ನು ರಚಿಸಿದರು. ಕೃತಿಯು ಆರ್. ಕಲ್ಯಾಣಮ್ಮ ಅವರ ಬದುಕು-ಸಾಧನೆಗಳ ಸಂಕ್ಷಿಪ್ತ ಪರಿಚಯವನ್ನು ಕಟ್ಟಿಕೊಟ್ಟಿದೆ. ಡಾ. ಗೀತಾ ಶೆಣೈ ಬರೆದಿದ್ದು, ಡಾ. ನಾ. ಸೋಮೇಶ್ವರ ಅವರ ಕೃತಿಯನ್ನು ಸಂಪಾದಿಸಿದ್ದಾರೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE