ಪುರುಷೋತ್ತಮ ದಾಸ್ ಟಂಡನ್

Author : ನೀಲತ್ತಹಳ್ಳಿ ಕಸ್ತೂರಿ

Pages 102

₹ 15.00




Year of Publication: 1980
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು-560019
Phone: 9945036300

Synopsys

`ಪುರುಷೋತ್ತಮ ದಾಸ್ ಟಂಡನ್' ಅವರ ಜೀವನಚರಿತ್ರೆಯ ಪುಸ್ತಕವಿದು. ಲೇಖಕ ನೀಲತ್ತಹಳ್ಳಿ ಕಸ್ತೂರಿ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ,, ಕೈತುಂಬ ಹಣ ತರುತ್ತಿದ್ದ ವಕೀಲಿ ವೃತ್ತಿಯನ್ನು ಬಿಟ್ಟ ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿ ಟಂಡನ್ನರು ತ್ಯಾಗ, ಸೇವೆ, ಶಿಸ್ತು, ಸರಳತೆಯ ಮೂರ್ತಿಯಾಗಿದ್ದರು. ದೇಶಕ್ಕಾಗಿ ಮತ್ತೆ ಮತ್ತೆ ಸೆರೆಮನೆ ವಾಸವನ್ನು ಅನುಭವಿಸಿದರು. ರೈತರ ಬಂಧು. ಹಿಂದೀ ಭಾಷೆಗಾಗಿ ಅಪಾರವಾಗಿ ದುಡಿದರು. ಪದವಿ, ಅಧಿಕಾರಗಳನ್ನು ಬಯಸಲಿಲ್ಲ ಎಂದು ಪುರುಷೋತ್ತಮ ದಾಸ್ ಟಂಡನ್ ಅವರ ಕುರಿತಾಗಿ ಈ ಪುಸ್ತಕದಲ್ಲಿ ಬಣ್ಣಿಸಲಾಗಿದೆ. ಅವರ ಬಾಲ್ಯ ಜೀವನ, ವಕೀಲಿ ವೃತ್ತಿ, ಸೆರೆಮನೆ ವಾಸದ ದಿನಗಳು, ರೈತರೊಂದಿಗಿನ ಬಾಂಧವ್ಯ ಹೀಗೆ ಅವರ ಜೀವನದ ಪ್ರಮುಖ ಘಟ್ಟಗಳನ್ನು ಲೇಖಕರು ಈ ಕೃತಿಯಲ್ಲಿ ಸರಳ ಕನ್ನಡದಲ್ಲಿ ಸುಂದರವಾಗಿ ರಚಿಸಿದ್ದಾರೆ.

About the Author

ನೀಲತ್ತಹಳ್ಳಿ ಕಸ್ತೂರಿ
(29 September 1931)

ನೀಲತ್ತಹಳ್ಳಿ ಕಸ್ತೂರಿಯವರು ಮಾಗಡಿಯಲ್ಲಿ ಸೆಪ್ಟೆಂಬರ್ 29, 1931ರಂದು ಜನಿಸಿದರು. ತಂದೆ ವೆಂಕಟಾಚಾರ್ಯ, ತಾಯಿ ಸೀತಮ್ಮ. ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಅವರೊಬ್ಬ ಉತ್ತಮ ಅನುವಾದಕರು. ಚೀನಾ ಜಪಾನ್ ಕತೆಗಳು (ಅನುವಾದ) (ಕಾದಂಬರಿ), ಇದು ಭಾರತದ ದಾರಿ (ನಾಟಕ) ರಾಜೇಂದ್ರ ಪ್ರಸಾದ್, ಡಿ.ವಿ. ಗುಂಡಪ್ಪ ಜೀವನ ಮತ್ತು ಸಾಧನೆ, ಸಿದ್ಧವನಹಳ್ಳಿ ಕೃಷ್ಣಶರ್ಮ - ವ್ಯಕ್ತಿ ಮತ್ತು ಶಕ್ತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದೆ. ...

READ MORE

Related Books