ಪೃಥ್ವೀರಾಜ್ ಕಪೂರ್ ಜೀವನಚರಿತ್ರೆ ಪುಸ್ತಕವನ್ನು ಲೇಖಕ ಸಂತೋಷಕುಮಾರ ಗುಲ್ವಾಡಿ ಅವರು ರಚಿಸಿದ್ದಾರೆ. ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ಜೀವನವಿಡೀ ದುಡಿದು, ಪೃಥ್ವೀರಾಜ್ ಕಪೂರರು ಇಡೀ ದೇಶದಲ್ಲಿ ಖ್ಯಾತರಾದರು. ಕಲೆಗಳಿಗೆ ಮಹತ್ವದ ಸ್ಥಾನವನ್ನು, ಗೌರವವನ್ನು ದೊರಕಿಸಿ ಕೊಟ್ಟರು. ಅವರು ರಂಗಭೂಮಿ-ಚಲನಚಿತ್ರ ಪಿತಾಮಹ. ಈ ರಂಗಗಳಲ್ಲಿ ಕಲೆ, ಶಿಸ್ತು, ವ್ಯವಸ್ಥೆ ಮತ್ತು ವಾಸ್ತವಿಕತೆಗಳನ್ನು ತಂದು ಕೊಟ್ಟ ಶ್ರೇಷ್ಠ ಕಲೆವಿದ – ಶ್ರೇಷ್ಟ ಮಾನವ. ತನ್ನನ್ನೂ ತನ್ನ ಕುಟುಂಬದ ಮೂರು ತಲೆಮಾರುಗಳನ್ನು ಕಲೆಗಾಗಿಯೇ ಮುಡಿಪಾಗಿಸಿದ ಅದ್ವಿತೀಯ ಕಲಾರಾಧಕ ಎಂದು ಪೃಥ್ವೀರಾಜ್ ಕಪೂರ್ ಅವರ ಕುರಿತಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ.
ಸಂತೋಷ್ ಕುಮಾರ್ ಗುಲ್ವಾಡಿ ಅವರು ಮೂಲತಃ (ಜನನ:02-10-1938) ಉಡುಪಿಯವರು. ತಂದೆ- ರತ್ನಾಕರ ಭಟ್ ಹಿಂದೂಸ್ಥಾನಿ ಸಂಗೀತಗಾರರು. ಸಂಗೀತ ಕಲಿಸುತ್ತಿದ್ದರು. ಜೊತೆಗೆ ಬುಕ್ ಬೈಂಡಿಂಗ್, ಸಂಗೀತ ವಾದ್ಯಗಳ ತಯಾರಿ, ನಾಟಕದ ಪರದೆಗಳನ್ನು ಬರೆಯುವುದು, ರಂಗಮಂದಿರ ನಿರ್ಮಾಣ, ಮೇಕಪ್ ಸೇರಿದಂತೆ ಹಲವು ಕಲೆಗಳಲ್ಲಿ ಪರಿಣಿತರಾಗಿದ್ದರು. ಸಂತೋ಼ಕುಕಮಾರ ಗುಲ್ವಾಡಿ ಅವರು ಮೈಸೂರು ವಿವಿಯಿಂದ ಬಿಕಾಂ ಪದವೀಧರರು. ಮುಂಬೈ ವಿವಿಯಿಂದ ಕಾನೂನು ಪದವೀಧರರು. ಭಾರತೀಯ ವಿದ್ಯಾಭವನದಲ್ಲಿ ಪತ್ರಿಕೋದ್ಯಮದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಡಿಪ್ಲೊಮಾ ಪಡೆದರು. ನವಭಾರತ ಪತ್ರಿಕೆ ಸೇರಿದ ಅವರು ವ್ಯಂಗ್ಯ ಚಿತ್ರಕಾರರೂ ಹೌದು. ’ಸಿಂಗರ್ ಕಂಪೆನಿ’ಯಲ್ಲಿ ಸ್ವಲ್ಪದಿನ ಕೆಲಸ ಮಾಡಿದರು. ಮುಂಬೈನಲ್ಲಿ ಪತ್ರಿಕೋದ್ಯಮ ಹಾಗೂ ಜಾಹೀರಾತು ...
READ MORE