ಕರ್ನಾಟಕ ರಂಗಭೂಮಿಯಲ್ಲಿ ಸುಮಾರು ಆರೂವರೆ ದಶಕಗಳ ಕಾಲ ಆಲ್‌ರೌಂಡರ್ ಕಲಾವಿದೆಯಾಗಿ ರಂಗ ಸಾಮ್ರಾಜ್ಞಿಯಾಗಿ ವೈಭವದಿಂದ ಮೆರೆದವರು ಗುಡೂರು ಪ್ರಮೀಳಮ್ಮ. ಕೇವಲ ರಂಗಭೂಮಿಯಲ್ಲಿ ಮಾತ್ರವಲ್ಲದೆ, ಚಲನಚಿತ್ರ, ಕಿರುತೆರೆಗಳಲ್ಲಿಯೂ ತಮ್ಮ ಮನೋಜ್ಞ ಅಭಿನಯದಿಂದಾಗಿ ಹೆಸರಾದವರು. ಈ ಕಲಾವಿದೆಯ ಬದುಕು- ಕಲಾ ಸಾಧನೆ ಕುರಿತು ಲೇಖಕ ಮುರ್ತುಜಾ ಬ. ಒಂಟಿ ಅವರು ವಿವರಿಸಿದ್ದಾರೆ.
ಬರಹಗಾರರಾದ ಡಾ. ಮುರ್ತುಜಾ ಬ. ಒಂಟಿ ಅವರು 1970 ಜೂನ್ 1ರಂದು ಜನಿಸಿದರು. ಬಾಗಲಕೋಟೆ ಜಿಲ್ಲೆಯ ಹುನುಗುಂದ ಇವರ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಹುನಗುಂದ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ರಚನೆ ಇವರ ಪ್ರವೃತ್ತಿ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಹುನುಗುಂದ ಮಹಾವಿದ್ಯಾಲಯದಲ್ಲಿ ‘ಕನ್ನಡ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬಾಗಲಕೋಟೆ ಜಿಲ್ಲಾ ವಚನ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಶ್ರೀ ಶಾರದಾ ಸಂಗೀತ ನಾಟಕ ಮಂಡಳಿ ಗೋಕಾಕ, ವ್ಯಕ್ತಿ-ವಿಮರ್ಶೆ, ...
READ MORE