ಪಂಪ

Author : ಜಿ.ಎಸ್. ಶಿವರುದ್ರಪ್ಪ

Pages 120

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಪಂಪ' ಆದಿಕವಿ ಪಂಪನ ಕುರಿತು ಜೀವನಚರಿತ್ರೆ ಇದು. ಲೇಖಕ ಜಿ.ಎಸ್.‌ ಶಿವರುದ್ರಪ್ಪ ಅವರು ರಚಿಸಿದ್ದಾರೆ. ಕ10ನೇ ಶತಮಾನದ ಕವಿ, ’ಆದಿಪುರಾಣ’, ’ವಿಕ್ರಮಾರ್ಜುನ ವಿಜಯ’ (ಪಂಪ ಭಾರತ) ಮಹಾಕೃತಿಗಳ ಕರ್ತೃ; ಮಹಾಭಾರತದ ಕಥೆಯನ್ನು ಮೊಟ್ಟಮೊದಲು ಕನ್ನಡದಲ್ಲಿ ಬರೆದ ಕವಿ ಎಂದು ಕೃತಿಯಲ್ಲಿ ಪಂಪನ ಕುರಿತಾಗಿ ವಿವರಿಸಲಾಗಿದೆ. ಪಂಪನ ಜೀವನದ ತಿರುವುಗಳು, ಪಾಂಡಿತ್ಯದ ಪರಿಚಯ, ಸಾಹಿತ್ಯ ಪಯಣ ಹೀಗೆ ಅನೇಕ ಆಯಾಮಗಳಿಂದ ಜಿ. ಎಸ್.‌ ಶಿವರುದ್ರಪ್ಪನವರು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books