ಅಲಿವರ್ ಗೋಲ್ಡ್ ಸ್ಮಿತ್ -ಖ್ಯಾತ ಸಾಹಿತಿ-ವಿಮರ್ಶಕ ಪ್ರೊ. ಎಲ್.ಎಸ್. ಶೇಷಗಿರಿರಾವ್ ಅವರ ಕೃತಿ. ಇಂಗ್ಲಿಷ್ ಸಾಹಿತ್ಯದಲ್ಲಿ ಆಲಿವರ್ ಗೋಲ್ಡ್‌ಸ್ಮಿತ್ (1728-1774 ಹೆಸರು ಅಜರಾಮರ. ‘ಅಗಸ್ಟಿನ್ ಯುಗ’ದ ಶ್ರೇಷ್ಠ ಪ್ರಬಂಧಕಾರ. ಕವಿತೆ, ನಾಟಕ, ಕಾದಂಬರಿ, ಜೀವನ ಚರಿತ್ರೆಗಳನ್ನೂ ರೋಮನ್, ಇಂಗ್ಲೆಂಡ್ ಹಾಗೂ ಗ್ರೀಸಿನ ಚರಿತ್ರೆಗಳನ್ನೂ ಬರೆದಿದ್ದಾನೆ. ಗೋಲ್ಡ್‌ಸ್ಮಿತ್‌ನ ‘ಡೆಸರ್ಟೆಡ್ ವಿಲೆಜ್’ ಎಂಬುದು ಆತನ ಕವನ ಆಂಗ್ಲ ಸಾಹಿತ್ಯ ಓದಿದ ವಿದ್ಯಾರ್ಥಿಗೆ ಪರಿಚಿತವೆ. ಚೀನೀ ಪ್ರವಾಸಿಯೊಬ್ಬ ತನ್ನ ಗುರುವಿಗೆ ಬರೆದ ಪತ್ರ ರೂಪದ ಪ್ರಬಂಧ ಸಂಗ್ರಹ ‘ದಿ ಸಿಟಿಜನ್ ಆಫ್ ದಿ ವರ್ಲ್ಡ್’ -ಉತ್ತಮ ಕೃತಿಯಾಗಿದೆ. ‘ಷಿ ಸ್ಟೂಪ್ಸ್ ಟು ಕಾನ್‌ಕರ್’ ಅವನ ಪ್ರಸಿದ್ಧ ನಾಟಕ. ‘ವಿಕಾರ್ ಆಫ್ ವೇಕ್‌ಫೀಲ್ಡ್’ ಅವನ ಕಾದಂಬರಿ. ಗೋಲ್ಡ್‌ಸ್ಮಿತ್‌ನ ಜೀವನ ಮತ್ತು ಸಾಹಿತ್ಯವನ್ನು, ಈ ಕಿರು ಹೊತ್ತಿಗೆ ಸಮಗ್ರವಾಗಿಯೂ ಪರಿಚಯಿಸುತ್ತದೆ. ಆಂಗ್ಲ ಸಾಹಿತಿಯೊಬ್ಬರ ವಿಮರ್ಶೆ ಸಹಿತ ಸಾಹಿತ್ಯ ವಿವರಣೆಯ ಈ ಕೃತಿಯು ಕನ್ನಡ ಸಾಹಿತ್ಯದಲ್ಲಿ 40 ವರ್ಷದಷ್ಟು ಹಿಂದೆಯೇ ಪ್ರಕಟಗೊಂಡಿತ್ತು.
ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...
READ MORE