ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರ ಕೃತಿ-ನಿಜಶರಣ ಅಂಬಿಗರ ಚೌಡಯ್ಯ. ಕನ್ನಡ ವಚನ ಸಾಹಿತ್ಯದ ಕುರುಹುಗಳು ಬಲು ಪ್ರಾಚೀನ ಕಾಲದಿಂದಲೂ ಇದ್ದಿರಬಹುದಾದರೂ ಒಂದು ವ್ಯವಸ್ಥಿತ ಸಾಹಿತ್ಯ ಪ್ರಕಾರವಾಗಿ ವಚನ ಸಾಹಿತ್ಯ ಕಾಣಿಸಿಕೊಂಡಿದ್ದು. 12ನೇ ಶತಮಾನದಲ್ಲಿ ಅನ್ನುವುದರಲ್ಲಿ ಭಿನ್ನಾಭಿಪ್ರಾಯ ವಿಲ್ಲ ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ,ಮೋಳಿಗೆ ಮಾರಯ್ಯ,ದೇವರದಾಸಿಮಯ್ಯ, ಮೊದಲಾದ ಶಿವಶರಣರ ನಿರ್ಮಿತವಾದ ವಚನಗಳ ರೂಪದಲ್ಲಿ ಇವತ್ತು ಸಾಹಿತ್ಯ ಮೂಡಿಬಂದಿತ್ತು. ಅಂಬಿಗರ ಚೌಡಯ್ಯ ನವರ ಕುರಿತು ಸಂಕ್ಷಿಪ್ತ ಜೀವನ ವನ್ನು ತಿಳಿಸಿ ಕೊಡುವ ನಿಟ್ಟಿನಲ್ಲಿ ಪುಸ್ತಕ ಹೊರ ಬಂದಿದ್ದು, ಅಂಬಿಗರ ಚೌಡಯ್ಯನವರ ಜೀವನ ವೃತ್ತಾಂತ, ಅಂಬಿಗರ ಚೌಡಯ್ಯನವರ ವಚನಾoಕಿತ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಗುರು-ಲಿಂಗ-ಜಂಗಮ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಕಾಳಜಿ,ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕ ನಿಷ್ಠೆ,ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾವ್ಯಸೌಂದರ್ಯ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಜನಪದಿಯ ನುಡಿಗಳು, ಅಂಬಿಗರ ಚೌಡಯ್ಯನವರ ವ್ಯಕ್ತಿತ್ವ, ಹೀಗೆ ಹಲವು ಸಂಗತಿಗಳನ್ನುಈ ಕೃತಿಯು ಒಳಗೊಂಡಿದೆ.
ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾoವ್ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾರ್ಥಮಿಕ, ಪ್ರೌಢ ಶಿಕ್ಷಣ ಪಡೆದು, ನಂತರ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಅರ್ಥಶಾಸ್ತ್ರ) ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ನಲ್ಲಿ ಎಂ. ಎ (ಶಿಕ್ಷಣ) ಪದವೀಧರರು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ (ಪತ್ರಿಕೋದ್ಯಮ ) ಪದವೀಧರರು. ಅಲ್ಲದೇ, ಎಂ. ಫಿಲ್ ಮತ್ತು ಪಿ.ಎಚ್ ಡಿ ಹಾಗೂ ಡಿ. ಲಿಟ್ ಪದವೀಧರರು. ತಾಯಿಯವರ ಹೆಸರಿನಲ್ಲಿ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಸ್ಥಾಪಿಸಿ, ಆ ಮೂಲಕ 60 ಕ್ಕಿಂತ ಹೆಚ್ಚು ...
READ MORE