ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಅವರ ಸಂಪಾದಿತ ಕೃತಿ ‘ನಿಜಶರಣ ಅಂಬಿಗರ ಚೌಡಯ್ಯನವರು’. ಕೃತಿಗೆ ಮುನ್ನುಡಿ ಬರೆದ ಎಚ್. ಆಯ್. ತಿಮ್ಮಾಪೂರ, ‘ಅಂಬಿಗರ ಚೌಡಯ್ಯನು ಆತ್ಮವಿಶ್ವಾಸಿಕ ಅಪ್ರತಿಮಜ್ಞಾನಿ ತರ್ಕಶಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯು ಇತ್ತು ಎಂಬುದನ್ನು ಇಲ್ಲಿಯ ಲೇಖನಗಳು ಪ್ರಸ್ತುತಪಡಿಸಿದೆ. ತನು-ಮನ ಶುದ್ದವಾಗಿದ್ದವನು ಮಾತ್ರ ಗುರು ಆಗುತ್ತಾನೆ. ಸ್ಥಾವರ ಲಿಂಗ ಪೂಜಿಸುವುದು ಸರಿಯಲ್ಲ, ಮನಸ್ಸು - ಪ್ರೀತಿ ಸರಿಯಾಗಿದ್ದರೆ ರತ್ನಕ್ಕೆ ಸಮಾನ, ಲಿಂಗ ಬಿಟ್ಟು ಬೇರೆ ಲಿಂಗ ಪೂಜಿಸಬಾರದು-ಎಂಬಿತ್ಯಾದಿ ವಿಷಯ ವಚನಗಳ ವಿವರಣೆ ನೀಡಿದ ಲೇಖನಗಳು ಅರ್ಥಪೂರ್ಣವಾಗಿದೆ’ ಎಂದು ಪ್ರಶಂಸಿದ್ದಾರೆ.
ಲೇಖಕ ಬಸವರಾಜ ಫಕೀರಪ್ಪ ಸುಣಗಾರ ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಗೇರಿಯವರು. ತಂದೆ ಫಕೀರಪ್ಪ, ತಾಯಿ ನಿಂಗಮ್ಮ. ಬಿಎ, ಟಿಸಿಎಚ್ ಪೂರೈಸಿದ್ದಾರೆ. ಪ್ರಶಸ್ತಿ: ಆದಶ೯ ಶಿಕ್ಷಕ ಪ್ರಶಸ್ತಿ,ಗುರು ಕುಲ ರಾಜ್ಯ ಪ್ರಶಸ್ತಿ, ವರ್ಷದ ವ್ಯಕ್ತಿ ಪ್ರಶಸ್ತಿ 2013,ಮೌಲ್ಯ ಶಿಕ್ಷಣ ಸಂಪದ ರಾಜ್ಯ ಪ್ರಶಸ್ತಿ, ವಿವಿಧ ಮಠಾಧೀಶರಿಂದ ಸೇವಾ ರತ್ನ ಪ್ರಶಸ್ತಿ. ಕೃತಿಗಳು: ಅಭಿಮಾನದ ನನ್ನೂರು(ಅಂಕಣ ಬರಹಗಳ ಸಂಕಲನ), ನಿಜಶರಣ ಅಂಬಿಗರ ಚೌಡಯ್ಯನವರು(ಲೇಖನಗಳ ಸಂಗ್ರಹ), ಆದರ್ಶ ಶಿಕ್ಷಕ: ಒಂದು ಚಿಂತನೆ (ಲೇಖನಗಳ ಸಂಕಲನ), ಅನಿಸಿದ್ದು. ...
READ MORE