ಕಲಾ ಜಗತ್ತಿನಲ್ಲಿ ನೀಲಾ ಎಂಬ ನಾಮವು ಅದರ ಹಿರಿಮೆಯ ಸಂಕೇತದಂತೆ ಬೆಳೆದುಕೊಂಡು ಬಂದಿದೆ. ಅದನ್ನು ಅಂಕಿತ-ಅನ್ವರ್ಥಕವಾಗಿಸಿದವರು ಡಾ. ಸುಬ್ಬಯ್ಯನವರು.
ಅವರು ವರ್ಣಲೋಕದ ಅಸೀಮ, ಅನುಪಮ, ಅನನ್ಯ ಶಕ್ತಿ. ಅವರ ಜೀವನ-ಸಾಧನೆಗಳಿಗೆ ಕನ್ನಡಿಯಾದುದು ‘ನೀಲಾಮೃತ’ ಸುಬ್ಬಯ್ಯನವರ 63 ವಸಂತಗಳ ಸಂಭ್ರಮಕ್ಕೆ ಸಾಕ್ಷಿಯಾಗಿ ಈ ಕೃತಿ ಪ್ರಕಟವಾಗಿದೆ.
ಡಾ. ಬಸವರಾಜ ಎಸ್. ಕಲೆಗಾರ ಮೂಲತಃ ಯಾದಗಿರಿ ಜಿಲ್ಲೆಯವರು. ಕವಿ, ಲೇಖಕ, ಚಿತ್ರಕಲಾವಿದರು. ಎಂ.ವಿ.ಎ, ಎಂ.ಫಿಲ್, ಪಿಹೆಚ್.ಡಿ ಪದವೀಧರರು. ಹಂಪಿ ಕನ್ನಡ ವಿವಿಯಲ್ಲಿ ದೂರ ಶಿಕ್ಷಣ ನಿರ್ದೇಶನಾಯ ಮೂಲಕ ಪತ್ರಿಕೋದ್ಯಮ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ 2015-16ನೇ ಸಾಲಿನ ವಿಶೇಷ ಘಟಕ ಯೋಜನೆಯಡಿ ಸಂಶೋಧನೆ ಕೈಗೊಂಡಿದ್ದು, ಸಂಶೋಧನಾ ಅಧ್ಯಯನ ವಿಷಯ ‘ಸಗರನಾಡಿನ ಜನಪದ ಶಿಲ್ಪಿಗಳ ಕಲೆ ಮತ್ತು ಬದುಕು: ಒಂದು ಅಧ್ಯಯನ’ ಪ್ರಬಂಧ ಸಲ್ಲಿಸಿದ್ದಾರೆ. ಪ್ರಕಟಿತ ಕೃತಿಗಳು- ನೀ ಮರೆಯಾದ ಕ್ಷಣಗಳು, ಬೆಳಕು, ಸಂಗಣ್ಣ ಎಂ. ದೋರನಹಳ್ಳಿ ಕಲೆ ಮತ್ತು ಬದುಕು(ಸಂಶೋಧನೆ), ಕಲಾನ್ವೇಷಣೆ, ಚಿತ್ರಶಿಲೆಯಲ್ಲಿ ಬುದ್ಧ, ಗಡಿನಾಡ ಚಿತ್ರಶಾಲೆ, ದೃಶ್ಯ ...
READ MORE