ಪತ್ರಕರ್ತ ಪ್ರತಾಪಸಿಂಹ ಅವರು ನಾಯಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ವಿಶಿಷ್ಟ ನಡೆಯನ್ನು ಕುರಿತು ಬರೆದ ಕೃತಿ-ನರೇಂದ್ರ ಮೋದಿ ಯಾರೂ ತುಳಿಯದ ಹಾದಿ. ಕೃತಿಗೆ ಬೆನ್ನುಡಿ ಬರೆದಿರುವ ಪತ್ರಕರ್ತ ವಿಶ್ವೇಶ್ವರ ಭಟ್ ‘ಮೋದಿ ಸುತ್ತ ಕವಿದ ವಿವಾದ ಹಾಗೂ ತಪ್ಪುಗ್ರಹಿಕೆಗಳನ್ನು ಚಿಕಿತ್ಸಕ ದೃಷ್ಟಿಯಿಂದ ವಿಶ್ಲೇಷಿಸಿ, ಮೋದಿಗೆ ಸಿಗಬೇಕಾದ ನ್ಯಾಯವನ್ನು ದೊರಕಿಸಿಕೊಟ್ಟಿದ್ದಾರೆ’ ಎಂದು ಇಲ್ಲಿಯ ಬರಹಗಳನ್ನು ಪ್ರಶಂಸಿಸಿದ್ದಾರೆ.
ಪ್ರತಾಪ್ ಸಿಂಹ ಮೂಲತಃ ಸಕಲೇಶಪುರದವರು. ಪದವಿ ಪೂರ್ವ ಶಿಕ್ಷಣವನ್ನು ಚಿಕ್ಕಮಗಳೂರಿನಲ್ಲಿ ಮುಗಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ಎಸ್.ಡಿ.ಎಂ ಕಾಲೇಜಿನಿಂದ ಮನಃಶಾಸ್ತ್ರ ಹಾಗೂ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ಎಂಸಿಜೆ ಮಂಗಳೂರಿನಿಂದ ಪತ್ರಿಕೋದ್ಟಮದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಎಂ ಐ ಸಿ ಇ ಮಂಗಳೂರಿನಿಂದ ಕಂಪ್ಯೂಟರ್ ಅಪ್ಲಿಕೇಷನ್ಸ್ ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ. ವಿಜಯ ಕರ್ನಾಟಕದಲ್ಲಿ ಬೆತ್ತಲೆ ಜಗತ್ತು, ಕನ್ನಡಪ್ರಭದಲ್ಲಿ ಸುದ್ದಿ ಸಂಪಾದಕರಾಗಿ ಬೆತ್ತಲೆ ಪ್ರಪಂಚ ಅಂಕಣ ಬರೆಯುತ್ತಿದ್ದರು. ಬೆತ್ತಲೆ ಜಗತ್ತು- 14 ಪುಸ್ತಕಗಳು ( ಅಂಕಣ ಬರಹಗಳ ಸಂಗ್ರಹ), ನರೇಂದ್ರ ಮೋದಿ (ಯಾರೂ ತುಳಿಯದ ಹಾದಿ), ಟಿಪ್ಪು ಸುಲ್ತಾನ ಸ್ವಾತಂತ್ರವೀರನಾ, ಮೈನಿಂಗ್ ಮಾಫಿಯಾ, ಮೋದಿ ಮುಸ್ಲಿಂ ...
READ MORE