ನಾಮದೇವ

Author : ಸಿಂಪಿ ಲಿಂಗಣ್ಣ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ನಾಮದೇವ' ಜೀವನಚರಿತ್ರೆಯನ್ನು ಲೇಖಕ ಸಿಂಪಿ ಲಿಂಗಣ್ಣ ಅವರು ರಚಿಸಿದ್ದಾರೆ. ನಾಯಿಯಲ್ಲೂ ಪರಮಾತ್ಮನನ್ನು ಕಂಡ ಮಹಾತ್ಮ. ಭಕ್ತಿಪಂಥದ ಅಗ್ರಣಿ, ಪ್ರಸಾದವನ್ನು ದೇವರು ಪ್ರತ್ಯಕ್ಷ ತಿನ್ನುವಂತೆ ಮಾಡಿದ, ದೇವರೊಡನೆ ಸಂಭಾಷಿಸಿದ ಪ್ರತೀತಿಯುಳ್ಳ ಲೋಕೋತ್ತರ ಭಕ್ತ. ಕಠಿಣ ಆಧ್ಯಾತ್ಮ ವಿಚಾರವನ್ನು ಸರಳ ’ಅಭಂಗ’ಗಳ ಮೂಲಕ ಸಾಮಾನ್ಯರಿಗೂ ಅರ್ಥ ಮಾಡಿಸಿದ ಸಾಧು-ಸಾಹಿತಿ ನಾಮದೇವ ಎಂದು ಪುಸ್ತಕದಲ್ಲಿ ಪ್ರಸ್ತುತಪಡಿಸಲಾಗಿದೆ. ನಾಮದೇವನ ಜೀವನದ ಶೈಲಿ, ತನ್ನ ಜೀವನವನ್ನೇ ದೇವರ ಸೇವೆಗೆ ಮುಡಿಪಾಗಿಟ್ಟ ಬಗೆ, ಸಮಾಜಕ್ಕೆ ಕೊಟ್ಟ ಸಂದೇಶ, ತನ್ನ ಅಭೂತಪೂರ್ವ ಪಾಂಡಿತ್ಯದಿಂದ ಜನಸಾಮಾನ್ಯರಿಗೂ ತಲುಪಿದ ವಿಚಾರವಂತಿಕೆ... ಹೀಗೆ ನಾಮದೇವನ ಜೀವನ ಕುರಿತು ಹಲವಾರು ಘಟ್ಟಗಳನ್ನು ಈ ಕೃತಿಯ್ಲಲಿ ಚಿತ್ರಿಸಲಾಗಿದೆ.

About the Author

ಸಿಂಪಿ ಲಿಂಗಣ್ಣ
(11 February 1905 - 05 May 1993)

ಜಾನಪದ ಸಂಶೋಧಕರು, ಕವಿಗಳು, ಪ್ರಬಂಧಕಾರರು, ನಾಟಕಕಾರರೂ ಆದ ಲಿಂಗಣ್ಣನವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದಲ್ಲಿ. ತಂದೆ ಶಿವಯೋಗಪ್ಪ, ತಾಯಿ ಸಾವಿತ್ರಿ. ಚಿಕ್ಕವಯಸ್ಸಿನಲ್ಲಿಯೆ ತಂದೆ ತಾಯಿಯನ್ನು ಕಳೆದುಕೊಂಡು ಬೆಳದದ್ದು ಅಣ್ಣ ಅತ್ತಿಗೆಯರ ಆರೈಕೆಯಲ್ಲಿ. 1922ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ವಿದ್ಯಾಭ್ಯಾಸಕ್ಕೆ ಸೂಕ್ತ ಅವಕಾಶ ದೊರೆಯದೆ ಶಿಕ್ಷಕರ ವೃತ್ತಿಯನ್ನು ಆಯ್ದುಕೊಂಡರು. ಶಿಕ್ಷಕರ ಟ್ರೈನಿಂಗ್‌ ಪರೀಕ್ಷೆಯಲ್ಲಿ ಮುಂಬೈ ಕರ್ನಾಟಕದ ನಾಲ್ಕು ಜಿಲ್ಲೆಗಳಿಗೆ ಪ್ರಥಮ ಸ್ಥಾನ ಪಡೆದು ಹಲವರು ಬಹುಮಾನಗಳನ್ನು ಗಳಿಸಿದರು. 1925ರಲ್ಲಿ ಉಪಾಧ್ಯಾಯರಾಗಿ ಸೇರಿ ಭತಗುಣಕಿ, ಇಂಗಳೇಶ್ವರ, ಹಲಸಂಗಿ, ಇಂಡಿ, ಚಡಚಣ ಮುಂತಾದೆಡೆಯಲ್ಲೆಲ್ಲಾ ಸೇವೆ ಸಲ್ಲಿಸಿ ...

READ MORE

Related Books