ಡಾ.ಎನ್.ತಿರುಮಲೇಶ್ವರ ಭಟ್ಟ ಅವರ ‘ನಾಡೋಜ ಕೆ.ಪಿ.ರಾಯರ ನಾಡಿ,ನಡೆ,ನುಡಿ’ ಕೃತಿಯು ಕಿನ್ನಿಕಂಬಳ ಪದ್ಮನಾಭ ರಾವ್ ಅವರ ಜೀವನ ಚರಿತ್ರೆಯಾಗಿದೆ. ಉದಯಶಂಕರ್ ಎಚ್.ಎನ್ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ಹಲವಾರು ಭಾಷೆಗಳನ್ನು ಬಲ್ಲ ಕೆ.ಪಿ. ರಾಯರಿಗೆ ಅವುಗಳ ಆಳಕ್ಕಿಳಿದು ಭಾಷಾ ವಿಜ್ಞಾನವನ್ನು ಅರಿಯುವ ಕುತೂಹಲ, ವೇದದಿಂದ ಹಿಡಿದು, ಸ್ವರ, ವ್ಯಾಕರಣ ದವರೆಗೆ ಅಧ್ಯಯನ, ಭಾಷೆಯ ಉಗಮದ ಬಗ್ಗೆ ಸಂಶೋಧನೆ. ಎಲ್ಲರೂ ಕಂಪ್ಯೂಟರಿನಲ್ಲಿ ಹೊಸತೇನು ಬಂದಿದೆ ಎಂದು ತಿಳಿಯಲು ಕಷ್ಟಪಡುತ್ತಿದ್ದರೆ, ಇವರು 10 ವರ್ಷಗಳ ನಂತರ ಕಂಪ್ಯೂಟರ್ ಹೇಗಿರುತ್ತದೆ ಎಂದು ಪ್ರೌಢ ಪ್ರಬಂಧ ಮಂಡಿಸುತ್ತಾರೆ. ರಸ್ತೆ ಬದಿಯ ವ್ಯಾಪಾರಿಯಿಂದ ಹಿಡಿದು ಅಂತಾರಾಷ್ಟ್ರೀಯ ಸಂಶೋಧಕರ ವರೆಗೆ ಎಲ್ಲರಲ್ಲಿಯೂ ನಗುತ್ತಾ ಅವರ ಜಾತಿ, ಮತ, ಧರ್ಮಗಳನ್ನು ಮೀರಿ ಸ್ನೇಹದಿಂದ ವ್ಯವಹರಿಸುವ ಕೆ.ಪಿ. ರಾಯರು ಅಷ್ಟೇ ಸತ್ಯನಿಷ್ಠುರರು. ಅವರೊಂದಿಗೆ 25 ಸಂವತ್ಸರಗಳನ್ನು ಕಳೆದಿದ್ದೇನೆ ಎಂಬುದೇ ಸಾರ್ಥಕ್ಯ ಇನ್ನೂ 20ನೇಯ ಹುಟ್ಟುಹಬ್ಬವನ್ನು ಆಚರಿಸಿರುವ ಕೆ.ಪಿ. ರಾಯರು ಚಿರಕಾಲ ನಮ್ಮೊಂದಿಗಿರಲಿ ಎಂಬ ಹಾರೈಕೆ ನನ್ನದು’ ಎಂಬುದಾಗಿ ಹೇಳಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಜೀವನವೃತ್ತಾಂತ, ಅನುಭವ-ಸಾಧನಾ ಪ್ರಪಂಚ, ಉಡುಪಿಯಲ್ಲಿ ನೆಲೆ, ಕೃತಿಗಳ ಅವಲೋಕನ, ಕೆ.ಪಿ ರಾಯರ ಕೆಲವು ಅನುಭವಗಳು, ಇತರರು ಕಂಡಂತೆ ಕೆ.ಪಿ ರಾಯರು ಎಂಬ ಶೀರ್ಷಿಕೆಗಳಿವೆ.
ಲೇಖಕ ನೀರ್ಕಜೆ ತಿರುಮಲೇಶ್ವರ ಭಟ್ ಅವರು ಮೂಲತಃ ಬಂಟ್ವಾಳ ತಾಲೂಕಿನ ನೀರ್ಕಜೆಯವರು. ತಂದೆ - ನೀರ್ಕಜೆ ಮಹಾಲಿಂಗ ಭಟ್ಟ, ತಾಯಿ - ದೇವಕಿ ಅಮ್ಮ. ವಿಟ್ಲದ ವಿಠಲ ಹೈಸ್ಕೂಲಿನಲ್ಲಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಸೈನ್ಸ್ ಓದಿಕೊಂಡರು, ಅದೇ ಕಾಲೇಜಿನಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸದಲ್ಲಿ ಬಿ.ಎ ಪದವಿ ಪಡೆದರು. 1959ರಲ್ಲಿ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ, ಜರ್ಮನಿಯ ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಗ್ರೋಸೆಸ್ ಶ್ಟ್ರಾಖ್ ಡಿಪ್ಲೋಮಾ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ.ಎಸ್.ಬಿ.ಶೋತ್ರಿ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ...
READ MORE