ಲೇಖಕಿ ಗೀತಾ ಹರಿಹರ ಅವರ ’ನಾಡಿನ ಹೆಮ್ಮೆಯ ಸಂಶೋಧಕ ಎಂ.ಎಂ.ಕಲಬುರ್ಗಿ’ ಕೃತಿಯು ಎಂ.ಎಂ ಕಲಬುರ್ಗಿ ಅವರ ಜೀವನ ಚಿತ್ರಣವಾಗಿದೆ. ಕಲಬುರ್ಗಿಯವರು ಕುಲಪತಿಗಳಾಗಿ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಮಾರ್ಗವನ್ನು ಹಾಕಿಕೊಟ್ಟವರು. ಸಂಶೋಧನೆ, ಹಸ್ತಪ್ರತಿ ಶಾಸ್ತ್ರದ ಆಳವನ್ನು ಕೆದಕಿದವರು. ಅವರ ಮಹತ್ತರ ಮಾರ್ಗ ಸಂಪುಟಗಳು ಸಂಶೋಧನಾ ನೆಲದಲ್ಲಿ ಅರಳಿದವುಗಳು. ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಡಾ. ಕಲಬುರ್ಗಿ ಅಪಾರ ಶಿಷ್ಯಬಳಗವನ್ನು ಹೊಂದಿ ನಾಡಿನ ಕೈಂಕರ್ಯಕ್ಕೆ ತೊಡಗಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಅಂತಹ ಮೇರು ಸಾಹಿತಿಯ ಕುರಿತಾಗಿರುವ ಈ ಕೃತಿಯನ್ನು ಹೊಸ ತಲೆಮಾರಿನವರು ಅಭ್ಯಾಸ ಮಾಡಲು ಈ ಗ್ರಂಥ ಉಪಯುಕ್ತವಾಗಿದೆ.
ಲೇಖಕಿ ಗೀತಾ ಹರಿಹರ ಅವರು ಶಿಕ್ಷಕಿ. ಕೃತಿಗಳು: ಹೂವಾಗಿ ನಕ್ಕವರೆ (ಕವನ ಸಂಕಲನ), ಖಜೂರಿಯ ಕೋರಣೇಶ್ವರ(ಜೀವನ ಕಥನ), ಮಕ್ಕಳಿಗಾಗಿ ಸಂಕ್ಷಿಪ್ತ ಜೀವನ ಚಿತ್ರಣ, ನಾಡಿನ ಹೆಮ್ಮೆಯ ಸಂಶೋಧಕ ಎಂ.ಎ ಕಲಬುರ್ಗಿ(ಜೀವನ ಚಿತ್ರಣ) ...
READ MORE