ನಾವು ಅಮೃತಯಾನದ ಸಹ ಪಯಣಿಗರು

Author : ವಿವಿಧ ಲೇಖಕರು

Pages 160

₹ 126.00




Year of Publication: 2020
Published by: ಅಭಿರುಚಿ ಪ್ರಕಾಶನ
Address: #.386, 3ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಸರಸ್ವತಿಪುರ, ಮೈಸೂರು-09.

Synopsys

ನಾವು ಅಮೃತಯಾನದ ಸಹ ಪಯಣಿಗರು-ಈ ಕೃತಿಯನ್ನು ಲೇಖಕರಾದ ರಾಧೆ, ಪ್ರಸಾದ್ ಹಾಗೂ ಅಕ್ಷರ ರಕ್ಷಿದಿ ಬರೆದಿದ್ದಾರೆ. ಆತ್ಮೀಯರೊಬ್ಬರು ದೈಹಿಕವಾಗಿ ಇನ್ನಿಲ್ಲವಾದಾಗ ಆ ಭಾರದ ಭಾವವನ್ನು ಅಕ್ಷರ ರೂಪಕ್ಕೆ ಇಳಿಸುವುದು ತುಂಬಾ ಕಷ್ಟದ ಕೆಲಸ. ಇಂತಹ ಕೆಲವನ್ನು ಲೇಖಕರು ಮಾಡಿದ್ದು ಇಲ್ಲಿಯ ವಿಶೇಷ. ಮನೆಯಲ್ಲಿ ಲವಲವಿಕೆಯಿಂದಿದ್ದ ಅಮೃತಾ, ಶಾಶ್ವತವಾಗಿ ದೂರ ಸರಿದಾಗ ಆ ನೆನಪುಗಳು ಕಾಡುತ್ತವೆ ಮಾತ್ರವಲ್ಲ; ಅವರ ಬದುಕಿನ ರೀತಿ ನಮಗೆ ಉತ್ತಮ ಸಂಧೇಶ ನೀಡುತ್ತದೆ. ಜೀವನ ಪ್ರೀತಿಯನ್ನು ಬೋಧಿಸುತ್ತದೆ. ಇಂತಹ ಭಾವನೆಗಳನ್ನು ಒಳಗೊಂಡ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ.

ಕೃತಿಗೆ ಬೆನ್ನುಡಿ ಬರೆದ ಲೇಖಕ ಡಾ. ಕೆ.ಆರ್. ಅಶೋಕ ‘ ನಮ್ಮ ಮನೆಯಲ್ಲಿ ಅಮೃತಾಳಂಥ ಮಗುವಿದ್ದರೆ ಈ ಪುಸ್ತಕ ನಮಗೊಂದು ಮಾರ್ಗದರ್ಶಿಯಂತೆ, ದಾರಿದೀಪದಂತೆ ಉಪಯುಕ್ತ.  ಆಮೃತಾ ಒಂದಡೆ "ನಮ್ಮಂಥವರು ಸಮಾಜಕ್ಕೆ ಸಮಸ್ಯೆಯಾದರೆ, ನಮ್ಮಂಥವರಿಗೆ ಇಡೀ ಸಮಾಜವೇ ಸಮಸ್ಯೆ ಎಂದು ಹೇಳುತ್ತಾಳೆ. ಸಮಾಜದ ಮನಸ್ಥಿತಿಯನ್ನು ಒಂದಷ್ಟಾದರೂ ಸರಿಪಡಿಸಲು ಈ ಪುಸ್ತಕ ಮತ್ತು "ಅಮೃತಯಾನ" ಸಹಕಾರಿಯಾಗಬಲ್ಲದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books