ಯುವ ಸ್ವಾತಂತ್ಯ್ರ ಹೋರಾಟಗಾರ, ವಿದ್ಯಾರ್ಥಿ ಯುವಜನರ ನಾಯಕ ಭಗತ್ಸಿಂಗ್ ಅವರು 23 ವಯಸ್ಸಿದ್ದಾಗಲೇ ನೇಣಿಗೇರಿದರು. ಬಾಲ್ಯದಿಂದಲೇ ರಾಜಕೀಯ ಚಿಂತನೆ ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಅವರು ಸಮಾಜವಾದಿ ಸ್ವಾಂತಂತ್ಯ್ರದ ಕನಸು ಹೊತ್ತಿದ್ದರು. ನಾನೇಕೆ ಈ ರಾಜಕೀಯ ಚಿಂತನೆಯಲ್ಲಿ ತೊಡಗಿದೆ? ನಾನೇಕೆ ನಾಸ್ತಿಕನಾದೆ ಎಂಬುದರನ್ನು ಭಗತ್ಸಿಂಗ್ ಅವರೇ ಜೈಲುವಾಸದ ದಿನಗಳಲ್ಲಿ ಬರೆದಿದ್ದರು. ಈ ಕೃತಿಯು ಹಲವು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಎನ್. ಗಾಯತ್ರಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯು ಹದಿನಾಲ್ಕು ಬಾರಿ ಮುದ್ರಣಗೊಂಡಿದೆ.
ಲೇಖಕಿ ಡಾ. ಎನ್. ಗಾಯತ್ರಿ ಮೂಲತಃ ಬೆಂಗಳೂರಿನವರು. 1957 ರ ಜನೆವರಿ 17 ರಂದು ಜನನ. ಸಾಹಿತ್ಯದಲ್ಲಿ ಎಂ.ಎ ಹಾಗೂ ಪಿಎಚ್.ಡಿ ಪದವೀಧರರು. ರಿಸರ್ವ್ ಬ್ಯಾಂಕಿನಲ್ಲಿ ಅಧಿಕಾರಿ.ಮಹಿಳಾ ಪರ ಚಿಂತಕಿ, ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದ ಸ್ಥಾಪಕ ಕಾರ್ಯದರ್ಶಿಯಾಗಿ 25 ವರ್ಷ ಸೇವೆ ಸಲ್ಲಿಸಿದ್ದಾರೆ. 22 ವರ್ಷ ಕಾಲ 'ಅಚಲ' ಮಾಸಪತ್ರಿಕೆಯ ಸಂಪಾದಕಿಯಾಗಿದ್ದು ಮಹಿಳಾ ಹೋರಾಟಗಳಿಗೆ ಸೈದ್ಧಾಂತಿಕ ನೆಲೆ ಕಲ್ಪಿಸಿಕೊಟ್ಟವರು. ಈಗ 'ಹೊಸತು' ಪತ್ರಿಕೆಯ ಸಂಪಾದಕ ಬಳಗದಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃತಿಗಳು 'ಮಹಿಳೆ: ಬಿಡುಗಡೆಯ ಹಾದಿಯಲ್ಲಿ’, 'ಮಹಿಳಾ ಚಳವಳಿಯ ಮಜಲುಗಳು’, 'ಮುಖಾಮುಖಿ', 'ಕ್ಲಾರಾ ಜೆಟ್ಕಿನ್, 'ಮಹಿಳಾ ಮೀಸಲಾತಿ' ಮತ್ತು 'ಲಿಂಗ ರಾಜಕಾರಣ', ಫ್ರೆಡರಿಕ್ ...
READ MORE