ಜೀವಮಾನದುದ್ದಕ್ಕೂ ಕನ್ನಡದ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಪತಿ, ಸಮಾಜ, ಕಲೆ, ಇತಿಹಾಸ, ತಂತ್ರಜ್ಞಾನ ಹೀಗೆ ಹಲವು ನೆಲೆಗಳಲ್ಲಿ ಕನ್ನಡ ಹಾಗೂ ಕರ್ನಾಟಕವನ್ನು ಕ್ರಿಯಾಶೀಲವಾಗಿಸುತ್ತ ಬಂದ ವ್ಯಾಕರಣ ತೀರ್ಥ ಹಾಗೂ ನಾಡೋಜ ಚಂದ್ರಶೇಖರ ಶಾಸ್ತ್ರಿ ಅವರ ಬದುಕು, ಸಾಧನೆಗಳ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ.
ಬರಹಗಾರ ಎಂ.ಎಂ.ಶಿವಪ್ರಕಾಶ ಅವರು ಜನಿಸಿದ್ದು 1968 ಜುಲೈ 1ರಂದು. ಹುಟ್ಟೂರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲುಕಿನ ಹಿರೇಹಡಗಲಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸಾಹಿತ್ಯ ಅಧ್ಯಯನ ಬರವಣಿಗೆ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡವರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ಚಂದ್ರ ಚೇತನ(ಸಂ)1992, ಕುಟುಂಬ 1993(ನವಸಾಕ್ಷರ ಮಾಲೆ), ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿ(ಬದುಕು ಬರಹ)1999, ಮುತ್ಸದ್ದಿ(ಎಂ.ಪಿ.ಪ್ರಕಾಶ್ ಕುರಿತ ಪತ್ರಿಕಾ ಲೇಖನಗಳ ಸಂಗ್ರಹ)2004. ರಂಗಭಾರತಿ , ಎಂಪಿ ಪ್ರಕಾಶ್ ಸಮಗ್ರ ಲೇಖನಗಳು ಸಂಗ್ರಹ 2011, ಮುತ್ಸದ್ದಿ ಸಂಪುಟ 2 ಎಂಪಿ ಪ್ರಕಾಶ್ ಕುರಿತ ಲೇಖನಗಳು 2012, ಸಂಕಥನ 2014, ಎಂಪಿ ...
READ MORE