ನಾಡೋಜ ಸುಭದ್ರಮ್ಮ ಮನ್ಸೂರು

Author : ಗುಡಿಹಳ್ಳಿ ನಾಗರಾಜ

Pages 144

₹ 120.00




Year of Publication: 2020
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ- 583276

Synopsys

‘ನಾಡೋಜ ಸುಭದ್ರಮ್ಮ ಮನ್ಸೂರು’ ಲೇಖಕ ಗುಡಿಹಳ್ಳಿ ನಾಗರಾಜ ಅವರ ಕೃತಿ. ಕರ್ನಾಟಕ ವೃತ್ತಿರಂಗಭೂಮಿ ನಾಟಕಕಾರ-ಮಾಲೀಕ-ನಟ ಈ ತ್ರಿಪಥದಲ್ಲಿ ತನ್ನ ವೈಭವವನ್ನು ಕಂಡುಕೊಂಡಿದೆ. ಪೌರಾಣಿಕ, ಚಾರಿತ್ರಿಕ, ಧಾರ್ಮಿಕ ಹಾಗೂ ಸಾಮಾಜಿಕ ನಾಟಕಗಳನ್ನು ಜನಮಾನಸಕ್ಕೆ ತಲುಪಿಸುವಲ್ಲಿ ನಾಟಕ ರಚನೆಕಾರ, ಕಂಪನಿ ಮಾಲೀಕ ಹಾಗೂ ನಟರು ತುಂಬಾ ಮುಖ್ಯರಾಗುತ್ತಾರೆ. ಅದರಲ್ಲೂ ನಟಿಯರ ಪಾಲ್ಗೊಳ್ಳುವಿಕೆ ಸಾಧ್ಯವಿಲ್ಲದ ಸಂದರ್ಭದಲ್ಲಿ ಯಾರಿಗೂ ಕಡಿಮೆ ಇಲ್ಲದಂತೆ ಹಾಡು-ಸಂಭಾಷಣೆ-ಅಭಿನಯಗಳ ಮೂಲಕ ಅನೇಕ ಜನ ಮಹಿಳೆಯರು ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇಂತಹವರಲ್ಲಿ ಬಳ್ಳಾರಿಯ ಮನ್ಸೂರು ಸುಭದ್ರಮ್ಮನವರು ಒಬ್ಬರು. ಕನ್ನಡ-ತೆಲುಗು ಭಾಷೆಗಳಲ್ಲದೆ ಸಂಗೀತದ ಒಲವು ಶ್ರೀಮತಿ ಸುಭದ್ರಮ್ಮನವರಿಗೆ ಹಳ್ಳಿಯ ಹವ್ಯಾಸಿ ನಾಟಕಗಳಿಂದ ಹಿಡಿದು ವೃತ್ತಿರಂಗಭೂಮಿಯಲ್ಲಿ ಮೊದಲಿನಿಂದಲೂ ಇತ್ತು ಹಳ್ಳಿಯ ಹವ್ಯಾಸಿ ನಾಟಕಗಳಿಂದ ಹಿಡಿದು ವೃತ್ತಿರಂಗಭೂಮಿಯಲ್ಲಿ ದುಡಿದ ಸುಭದ್ರಮ್ಮನವರು ರಂಗಭೂಮಿಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅವರ ಕಲಾಸೇವೆಯ ಕುರಿತಾಗಿ ಗುಡಿಹಳ್ಳಿ ನಾಗರಾಜ ಅವರು ರಚಿಸಿರುವ ಈ ಕೃತಿ ಕರ್ನಾಟಕ ವೃತ್ತಿರಂಗಭೂಮಿಯ ಅಭೂತಪೂರ್ಣ ಮಾಹಿತಿಗಳನ್ನು ಒಳಗೊಂಡಿದೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books