ಮೋಹನ್ ದಾಸ್ : ಒಂದು ಸತ್ಯಕಥೆ

Author : ಜಿ.ಎನ್. ರಂಗನಾಥ ರಾವ್

Pages 952

₹ 775.00




Year of Publication: 2012
Published by: ಲೋಕ ಶಿಕ್ಷಣ ಟ್ರಸ್ಟ್
Address: ರೆಸಿಡೆನ್ಸಿ ರಸ್ತೆ, ರಿಚ್ ಮಂಡ್ ವೃತ್ತ,  ಬೆಂಗಳೂರು

Synopsys

ಮಹಾತ್ಮಗಾಂಧೀಜಿ ಅವರ ಮೊಮ್ಮಗ ರಾಜ್ ಮೋಹನ್ ದಾಸ್ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು  ಹಿರಿಯ ಲೇಖಕ, ಪತ್ರಕರ್ತ ಜಿ.ಎನ್ ರಂಗನಾಥ ರಾವ್ ಅವರು ಅನುವಾದಿಸಿದ ಕೃತಿ- ’ಮೋಹನ್ ದಾಸ್ ಒಂದು ಸತ್ಯಕಥೆ’ ಮಹಾತ್ಮ ಗಾಂಧಿ ಕುರಿತ ಒಂದು ಸತ್ಯ ಕತೆಯಾಗಿದೆ. ಈ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಪುರಸ್ಕೃತವಾಗಿದೆ. ಕೇವಲ ಚಾರಿತ್ರಿಕ ಪುನರ್ ಸೃಷ್ಟಿಯಾಗದೇ ಇವತ್ತಿನ ಜ್ವಲಂತ ಸಮಸ್ಯೆಗಳಿಗೂ ಬೆಳಕಿಂಡಿಯಾಗಿದೆ. ಮುಸ್ಲಿಂ ಮತ್ತು ಮುಸ್ಲಿಮೇತರ ಜನರ ನಡುವಣ ಸ್ನೇಹ -ಸಾಮರಸ್ಯಗಳ ಮರು ಹೊಂದಾಣಿಕೆಗಾಗಿ ಜಗತ್ತು ತುದಿಗಾಲಿನಲ್ಲಿ ನಿಂತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಕೃತಿಯು ಸುಸಂಗತವೆನಿಸುವ ಕೃತಿ ಎಂದು ಅಭಿಪ್ರಾಯಪಡಲಾಗುತ್ತಿದೆ.. 

ಕೃತಿಗೆ ಬೆನ್ನುಡಿ ಬರೆದಿರುವ ಅಶೋಕ್ ಹಾರನಹಳ್ಳಿ ಅವರು, ‘ಗಾಂಧೀಜಿಯವರು ಅದ್ಭುತವಾದ ಅಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರು. ಈ ಅಧ್ಯಾತ್ಮಿಕ ಶಕ್ತಿಯಿಂದ ಅವರು ತಮ್ಮ ಜೊತೆಗಿನ ಸಾಮಾನ್ಯ ಮನುಷ್ಯರನ್ನು ಅಸಾಮಾನ್ಯರಾಗಿ ಪರಿವರ್ತಿಸಿದರು. ಗಾಂಧೀಜಿಯವರ ಹಾಗೂ ರಾಜಾಜಿಯವರ ಮೊಮ್ಮಗ ಕಂಡಿರುವ ತಾತನ ನೈಜ ಚಿತ್ರಣ ಇಲ್ಲಿದೆ. ಲೇಖಕರು ಇಲ್ಲಿ ತಾತನ ಅಂತರಂಗ – ಬಹಿರಂಗಗಳನ್ನು ವಸ್ತುನಿಷ್ಟವಾಗಿ ವಿವರಿಸಿದ್ದಾರೆ. ಇಪ್ಪತ್ತನೇ ಶತಮಾನದ ಮಹಾನ್ ಹೋರಾಟಗಾರನ ನೈಜ ರೂಪ ಇಲ್ಲಿದೆ. ಸ್ವಾತಂತ್ಯ್ರ ಹಿಂದೂ- ಮುಸ್ಲಿಂ ಏಕತೆ, ಬ್ರಹ್ಮಚರ್ಯೆಯ ಪಾಲಕನ ಅಂತರಂಗದ ತುಮುಲಗಳನ್ನು ಈ ಕೃತಿ ಸ್ಪಷ್ಟಪಡಿಸುತ್ತದೆ. ಅಲ್ಲದೇ, ಗಾಂಧೀಜಿ ಅವರ ಪತ್ನಿ ಕಸ್ತೂರಿ ಬಾ, ಮಗ ಹರಿಲಾಲ್, ವಲ್ಲಭಭಾಯಿ ಪಟೇಲ್ , ನೆಹರೂ, ರಾಜೇಂದ್ರ ಪ್ರಸಾದ್ , ರಾಜಾಜಿ, ಅಂಬೇಡ್ಕರ್ ಮುಂತಾದ ಹೋರಾಟಗಾರರು ಈ ಕೃತಿಯಲ್ಲಿ ಚಿತ್ರಿತರಾಗಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

About the Author

ಜಿ.ಎನ್. ರಂಗನಾಥ ರಾವ್
(12 January 1942 - 09 October 2023)

ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ.   ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು  ಪ್ರಕಾರಗಳಲ್ಲಿ ...

READ MORE

Related Books