ಲೇಖಕ ಆರ್.ಬಿ. ಗುರುಬಸವರಾಜ ಅವರ ಕೃತಿ-ಮಿಲ್ಕಾಸಿಂಗ್. ವೇಗದ ಓಟಗಾರ ಮಿಲ್ಕಾಸಿಂಗ್ ಕುರಿತು ಬಂದ ಕನ್ನಡದ ಮೊದಲ ಕೃತಿ ಎಂಬ ಹೆಗ್ಗಳಿಕೆ ಈ ಕೃತಿಗೆ ಇದೆ. ಸತತ ಮೂರು ಬಾರಿ ಚಿನ್ನದ ಪದಕ ಗಳಿಸಿದ ಓಟಗಾರ. ಮಿಲ್ಕಾಸಿಂಗ್ ನ ಬದುಕು-ಸಾಧನೆ, ಶ್ರಮಿಸಿದ ಹಾದಿಗಳು ಕುರಿತು ವಿವರಗಳಿವೆ. ಕ್ರೀಡಾಪಟುವಾಗುವ ಇತರೆ ಆಸಕ್ತರಿಗೂ ಈ ಕೃತಿ ಮಾದರಿ ಹಾಗೂ ಪ್ರೇರಣಾದಾಯಕ ಕೃತಿ ಇದು.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್.ಬಿ.ಗುರುಬಸವರಾಜ್, ಪ್ರವೃತ್ತಿಯಲ್ಲಿ ಲೇಖಕರು ಹೌದು. ಶಿಕ್ಷಣ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶಿಕ್ಷಣ ಲೇಖನಗಳ ಸಂಗ್ರಹ "ನೀವೂ ಸ್ಟಾರ್ ಆಗಿ", ಶಿಕ್ಷಕರ ಕೈಪಿಡಿ "ಯೋಚನೆ ಬಿಡಿ ಯೋಜನೆ ಮಾಡಿ", ಮಕ್ಕಳ ಕಿರುಕಾದಂಬರಿ "ಪಾಪ್ ಕಾರ್ನ್ ಪಾಪಜ್ಜಿ" ಸಂಪಾದಿತ ಕೃತಿ "ನೆಲದ ಮರೆಯ ನಿಧಾನ" ಎಂಬ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ...
READ MORE