ಎಂ.ಹಿರಿಯಣ್ಣ ಜೀವನ ಚರಿತ್ರೆ ಪುಸ್ತಕವನ್ನು ಲೇಖಕ ಎಲ್.ಎಸ್. ಶೇಷಗಿರಿರಾವ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಅಸಾಧಾರಣ ವಿದ್ವಾಂಸರು, ಸೌಜನ್ಯ ಸಂಸ್ಸೃತಿಗಳ ಗಣಿ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಮತ್ತು ತತ್ವಶಾಸ಼ಗಳ ಪ್ರಾಧ್ಯಾಪಕರಾಗಿದ್ದರು. ಇವರ ವಿದ್ಯಾರ್ಥಿಯಾಗುವುದೇ ಭಾಗ್ಯ ಎನ್ನಿಸುವಂತೆ ಪಾಠ ಹೇಳುವ, ಮಾರ್ಗದರ್ಶನ ಮಾಡುವ ಗುರು ಎಂದು ಹಿರಿಯಣ್ನ ಅವರನ್ನು ಬಣ್ಣಿಸಲಾಗಿದೆ. ಭಾರತೀಯ ತತ್ವಶಾಸ್ತ್ರವನ್ನು ಕುರಿತು ಇವರು ಬರೆದ ಗ್ರಂಥಗಳು ವಿದೇಶಗಳಲ್ಲಿಯೂ ಮೆಚ್ಚುಗೆ ಗಳಿಸಿವೆ ಎಂದು ಎಂ. ಹಿರಿಯಣ್ಣ ಅವರ ಕುರಿತಾಗಿ ವಿವರಿಸಲಾಗಿದೆ.
ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...
READ MORE