ಲೇಖಕ ಬಿ.ಎಚ್. ನಿರಗುಡಿ ಅವರ ಕೃತಿ-ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ. ದೇಶ ಕಂಡ ಅಪರೂಪದ ಮುತ್ಸದ್ಧಿ ಹಾಗೂ ಪ್ರಧಾನಿ ಎಂದೇ ಖ್ಯಾತಿಯ ಅಟಲ್ ಬಿಹಾರಿ ವಾಜಪೇಯಿ ಅವರನ್ನು , ಕವಿ, ರಾಜಕಾರಣಿ, ಮುತ್ಸದ್ಧಿತನ, ಭಾಷಣದ ಚತುರತೆ, ಆಡಳಿತ ವೈಖರಿ, ವಿರೋಧ ಪಕ್ಷದ ಹೊಣೆಗಾರಿಕೆಯ ದಿಟ್ಟತನ ಹೀಗೆ ವಿವಿಧ ಆಯಾಮಗಳೊಂದಿಗೆ ಪರಿಚಯಿಸಿದ್ದಾರೆ. ಭಾಷೆಯು ಸರಳವಾಗಿದ್ದು, ಮಕ್ಕಳು ಸಹ ಆರ್ಥ ಮಾಡಿಕೊಂಡು ಪ್ರೇರಣೆ ಪಡೆಯುವುದು ಈ ಕೃತಿಯ ಆಕರ್ಷಣೆ. 2006ರಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಕೃತಿಯು ಇದೀಗ ಐದನೇ ಆವೃತ್ತಿಯಾಗಿ ಪ್ರಕಟಗೊಂಡಿದೆ.
ಲೇಖಕ ಬಿ.ಎಚ್. ನಿರಗುಡಿ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕವಲಗಾ ಗ್ರಾಮದವರು. ಗುಲಬರ್ಗಾ ವಿವಿಯಿಂದ ಎಂ.ಎ, ಎಂ.ಇಡಿ ಪದವೀಧರರು. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಗರದ ಖಾಸಗಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ಸಾಹಿತ್ಯ ಸಾರಥಿ’ ಮಾಸ ಪತ್ರಿಕೆಯ ಸಂಪಾದಕರು. ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಗೌರವಿಸುತ್ತಿದ್ದಾರೆ. ಕಲಬುರಗಿ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕೃತಿಗಳು: ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಕನ್ನಡ ಭಾಷೆ ಹಾಗೂ ...
READ MORE