`ಮದನಮೋಹನ ಮಾಳವೀಯ' ಅವರ ಜೀವನ ಚರಿತ್ರೆಯ ಪುಸ್ತಕವಿದು. ಲೇಖಕ ಅರ್ಚಕ ವೆಂಕಟೇಶ್ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ, ಭಾರತೀಯರಿಗೆ ಸ್ವದೇಶಿ ಶಿಕ್ಷಣ ಕೊಡುವ ಸಲುವಾಗಿ ಅಖಂಡ ಪರಿಶ್ರಮದಿಂದ ’ಕಾಶಿ ಹಿಂದೂ ವಿಶ್ವವಿದ್ಯಾಲಯ’ ಸ್ಥಾಪಿಸಿದ ’ರಾಷ್ಟ್ರೀಯ ಭಿಕಾರಿ’, ಆದರ್ಶ ಪತ್ರಕರ್ತ, ಧಾರ್ಮಿಕ ನೇತಾ, ಬಹುಮುಖ ಪ್ರತಿಭೆಯ ಪಂಡಿತ, ರಾಜಕೀಯ ಮುಖಂಡ, ’ಮಹಾಮನಾ’ ಎಂದು ಮದನಮೋಹನ ಮಾಳವೀಯ ಅವರ ಕುರಿತು ಲೇಖಕರು ವಿವರಿಸಿದ್ದಾರೆ. ಮದನಮೋಹನ ಮಾಳವೀಯ ಅವರು ಸ್ವದೇಶಿ ಶಿಕ್ಷಣದ ಕುರಿತಾಗಿ ಹೊಂದಿದ ಒಲವು, ಪತ್ರಿಕೋದ್ಯಮದ ಜೀವನ. ಅಭೂತಪೂರ್ವ ಪಾಂಡಿತ್ಯ ಹೀಗೆ ಹಲವಾರು ಪ್ರಮುಖ ವಿಷಯಗಳನ್ನು ಈ ಪುಸ್ತಕವು ಒಳಗೊಂಡಿದೆ.
ಹಿರಿಯ ಸಾಹಿತಿ ಅರ್ಚಕ ವೆಂಕಟೇಶ ಅವರು 1916 ಜುಲೈ 5ರಂದು ಧಾರವಾಡದಲ್ಲಿ ಜನಿಸಿದರು. ತಾಯಿ ರಾಧಾಬಾಯಿ. ತಂದೆ ಗೋಪಾಲಕೃಷ್ಣಾಚಾರ್ಯ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಿಗಿಸಿಕೊಂಡಿದ್ದ ಇವರು ನನ್ನ ನುಡಿ ಕೈಬರಹ ಪತ್ರಿಕೆಯಲ್ಲಿ ಬರವಣಿಗೆ ಆರಂಭಿಸಿದರು. ಶರಣ ಸಾಹಿತ್ಯ ಮತ್ತು ಸ್ವತಂತ್ರ ಕರ್ನಾಟಕ ಪತ್ರಿಕೆಯ ಮೂಲಕ ವೃತ್ತಿ ಆರಮಭಿಸಿದರು. ಕತೆ, ಕಾದಂಬರಿ, ನಾಟಕ, ಕವನ ಸಂಕಲನ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರವಣಿಗೆ ಆರಂಭಿಸಿದ್ದ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ದಿಲ್ಲಿ ಚಲೋ, ರವಿಶಂಕ, ಅಸ್ತಿಪಂಜರ, ಧ್ರುವ ನಕ್ಷತ್ರ, ಜೀವನ ಸಂಗರಾಮ, ಪೂರ್ಣಚಂದ್ರ, ಶಬ್ದಶಿಲ್ಪ ಶಿಲಾಪಕ್ಷಿ, ಸಂಧ್ಯಾರಾಗ, ಮೀರ್ಸಾದಿಕ್, ಪಂಗನಾಮ, ...
READ MORE