ಕರ್ನಾಟಕದಲ್ಲಿ ಶಿಲ್ಪಕಲೆಗಾಗಿ ದುಡಿದವರ ಬಗ್ಗೆ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಶಿಲ್ಪಕಲಾವಿದರ ಮಾಲೆಯನ್ನು ಹೊರತಂದಿತು. ಅದರಲ್ಲಿನ ಸರಣಿ ಪುಸ್ತಕಮಾಲೆಯಲ್ಲಿ ಒಂದಾದ ’ಎಂ. ಪರಮೇಶ್ವರಾಚಾರ್ಯ’ ಪುಸ್ತಕ ಲೇಖಕರಾದ ಡಾ. ಎಂ. ಪೂರ್ವಾಚಾರ್ ಅವರಿಂದ ಪ್ರಕಟಗೊಂಡಿದೆ.
ಎಂ. ಪರಮೇಶ್ವರಾಚಾರ್ಯ ಅವರು ನಾಡಿನ ಪ್ರಖ್ಯಾತ ಶಿಲ್ಪಿಗಳು. ಅವರ ಬಾಲ್ಯ, ಬೆಳೆದು ಬಂದ ಹೆಜ್ಜೆ, ಶಿಲ್ಪಕಲೆಯಲ್ಲಿ ಆಸಕ್ತಿ ಮೂಡಿದ ಬಗೆ, ಜೀವನ ಸಾಧನೆ, ಶಿಲ್ಪಕಲೆಗೆ ನೀಡಿದ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿಕೊಡುವ ಪುಸ್ತಕ ಇದಾಗಿದೆ.
1990ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ. ಪದವಿ ಪಡೆದರು. 1992ರಲ್ಲಿ ಕುವೆಂಪು ವಿ.ವಿ. ಯಿಂದ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ., ಪದವಿ ಪಡೆದು 1992 ರಿಂದ 1997ರವರೆಗೆ ಡಾ| ಎಚ್.ಎಂ. ಪಂಚಾಕ್ಷರಯ್ಯನವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ “ಕನ್ನಡ ಚಲನಚಿತ್ರಗಳಲ್ಲಿ ಸ್ತ್ರೀ ಪಾತ್ರ ನಿರೂಪಣೆ - ಒಂದು ಸಮಾಜ ಶಾಸ್ತ್ರೀಯ ಅಧ್ಯಯನ' ಎಂಬ ವಿಷಯದ ಮೇಲೆ ಮಹಾ ಪ್ರಬಂಧ ಸಾದರಪಡಿಸಿ ಕುವೆಂಪು ವಿ.ವಿ. ದಿಂದ ಪಿಎಚ್.ಡಿ. ಪದವಿ ಪಡೆದರು. 1992 ರಿಂದ ಎಸ್.ಕೆ.ಆರ್.ಎಸ್. ಕಾಲೇಜು, ನೇರಲಕೆರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸದುರ್ಗ; ಕುವೆಂಪು ವಿ.ವಿ.ಯ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದಲ್ಲಿ ಸಮಾಜಶಾಸ್ತ್ರ ...
READ MORE