ಡಾ. ಎಸ್.ಎಸ್. ಅಂಗಡಿ ಅವರು ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಸಾಹಿತ್ಯ ಹಾಗೂ ಸಾಧನೆ ಕುರಿತು ವಿಸ್ತೃತವಾಗಿ ಬರೆದ ಕೃತಿ-ಎಂ. ಚಿದಾನಂದ ಮೂರ್ತಿ ಸಾಹಿತ್ಯ-ಸಾಧನೆ. ಕನ್ನಡ ಪರಂಪರೆ ಮತ್ತು ಎಂ. ಚಿದಾನಂದ ಮೂರ್ತಿ, ಭಾಷಿಕ ಶೋಧನೆಗಳು, ಛಂದಸ್ಸಿನ ಶೋಧನೆಗಳು, ಶಾಸನಗಳ ಸಾಂಸ್ಕೃತಿಕ ಅಧ್ಯಯನ, ವಚನ ಸಾಹಿತ್ಯದ ವೈಚಾರಿಕ ಅಧ್ಯಯನ, ಕನ್ನಡಾಯಣ ಒಂದು ವಿವೇಚನೆ, ಪಾಂಡಿತ್ಯರಸ: ಒಂದು ವಿವೇಚನೆ, ಗದ್ಯಶೈಲಿ, ವಿಮರ್ಶೆಯ ನಿಲುವು ಹೀಗೆ ವಿದ್ವತ್ ಪೂರ್ಣವಾದ ಒಟ್ಟು 18 ಅಧ್ಯಾಯಗಳಿದ್ದು, ಸಾಹಿತಿ-ಸಂಶೋಧಕ ಚಿದಾನಂದ ಮೂರ್ತಿ ಅವರ ಸಮಗ್ರ ಸಾಹಿತ್ಯಕ-ಸಂಶೋಧನೆಯ ಚಿತ್ರಣವನ್ನು ಸಂಶೋಧಕ ಎಸ್.ಎಸ್. ಅಂಗಡಿ ಅವರು ಕಟ್ಟಿಕೊಟ್ಟಿದ್ದಾರೆ.
ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ...
READ MORE