ಲೋಹವಿದ್ಯಾ ಪಾರಂಗತ ಕೆ. ನಾಗೇಶರಾವ್

Author : ಟಿ. ಆರ್. ಅನಂತರಾಮು

Pages 48

₹ 25.00




Year of Publication: 2009
Published by: ಹೊಯ್ಸಳ ಕರ್ನಾಟಕ ಸಂಘ
Address: 3ನೇ ಕ್ರಾಸ್, ಹೊಂಬೇಗೌಡ ನಗರ, ಬೆಂಗಳೂರು -560 027
Phone: 080–22274411

Synopsys

`ಲೋಹವಿದ್ಯಾ ಪಾರಂಗತ ಕೆ. ನಾಗೇಶರಾವ್’ ಕೃತಿ ಒಬ್ಬ ಪ್ರಸಿದ್ಧ ಲೋಹ ತಜ್ಞರಾಗಿದ್ದ ಕೆ. ನಾಗೇಶರಾವ್ ಅವರ ಬದುಕು, ಸಾಧನೆಯನ್ನು ಬಿಂಬಿಸುವ ಜೀವನ ಚರಿತ್ರೆ. ಹಿರಿಯ ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಮಾತಿನಲ್ಲಿ: ನಾಗೇಶರಾವ್ ಅವರು ಸಮಕಾಲೀನರಲ್ಲಿ ಅತ್ಯಂತ ಪ್ರಸಿದ್ಧರೂ ಪ್ರೌಢರೂ ಆದ ಲೋಹಶಾಸ್ತ್ರ ನಿಪುಣರು. ರಾಷ್ಟ್ರದ ಎಲ್ಲ ಕಡೆ ಅವರ ಪ್ರಭಾವ ವ್ಯಾಪಿಸಿತ್ತು. ತಮ್ಮನ್ನು ಎಂದೂ ತಾವೇ ಮುಂದುಮಾಡಿಕೊಳ್ಳದ ವಿನಯ ಅವರ ವ್ಯಕ್ತಿತ್ವಕ್ಕೆ ಮೆರಗು ನೀಡಿದೆ. ಟ್ರೈಬಾಲಜಿ ಎಂದರೆ ಬುಡಕಟ್ಟು ಜನಾಂಗ ಕುರಿತ ಅಧ್ಯಯನವಲ್ಲ, ಘರ್ಷಣೆ, ಸವೆತ ಮತ್ತು ಯಂತ್ರಕ್ಕೆ ಎಣ್ಣೆಯ ಲೇಪನಕ್ಕೆ ಸಂಬಂಧಿಸಿದ ಅಧ್ಯಯನ. ಈ ಕುರಿತು ನಾಗೇಶರಾವ್ ಬಹು ದೊಡ್ಡ ಪಂಡಿತರಾಗಿದ್ದರು. ಎಚ್.ಎಂ.ಟಿ. ಯಲ್ಲಿ ಮಿಲ್ಲಿಂಗ್ ಮೆಷಿನ್ ವಿಭಾಗದಲ್ಲಿ ಉನ್ನತ ಕೆಲಸ ಮಾಡಿದವರು. ಅನೇಕ ಕ್ಲಿಷ್ಟ ಸಮಸ್ಯೆಗಳನ್ನು ಅಲ್ಲಲ್ಲೇ ನಿರ್ವಹಿಸುತ್ತಿದ್ದ ನಿಪುಣರು. ಅವರು ರೂಪಿಸಿದ ಮಿಶ್ರಲೋಹಕ್ಕೆ ಎಚ್.ಎಂ.ಟಿ. ಸಂಸ್ಥೆ `ನಾಗಯೋಗಿ’ ಎಂಬ ಹೆಸರನ್ನು ನೀಡಿ ಗೌರವಿಸಿದೆ. ಅವರ ಸಾಧನೆಗಾಗಿ ಅವರಿಗೆ ರಾಷ್ಟ್ರೀಯ ಮಟ್ಟದ ಗೌರವವೂ ಸಂದಿದೆ. ಈ ಸಾಧಕ ಕನ್ನಡಿಗರೆಂಬುದು ಹೆಮ್ಮೆಯ ಸಂಗತಿ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books