ಲೇಖ-ಲೋಕ 3

Author : ಕೆ. ಉಷಾ ಪಿ. ರೈ

Pages 119

₹ 75.00




Year of Publication: 2001
Published by: ಕರ್ನಾಟಕ ಲೇಖಕಿಯರ ಸಂಘ
Address: 206, 2ನೇ ಮಹಡಿ, ವಿಜಯ ಮ್ಯಾನ್‌ಶನ್, 2ನೇ ತಿರುವು, 2ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018.

Synopsys

ಲೇಖ-ಲೋಕ 3 ಕೃತಿಯು ಮಹಿಳಾ ಸಾಹಿತಿಗಳ ಆತ್ಮಕಥೆಯಾಗಿದ್ದು, ಲೇಖಕಿಯರಾದ ಕೆ. ಉಷಾ ಪಿ.ರೈ ಹಾಗೂ ಡಾ. ಕೆ.ಆರ್.‌ ಸಂಧ್ಯಾರೆಡ್ಡಿ ಸಂಪಾದಿಸಿದ್ದಾರೆ. ಕೃತಿಯ ಪಾರಿವಿಡಿಯಲ್ಲಿ ಮಲ್ಲಿಕಾ ಕಡಿದಾಳ್‌ ಮಂಜಪ್ಪ, ಎ. ಪಂಕಜ, ಡಾ. ಸುನೀತಾ ಮಹಾಬಲ ಶೆಟ್ಟಿ, ವಿಶಾಲಾಕ್ಷಿ ದಕ್ಷಿಣ ಮೂರ್ತಿ, ಡಾ. ಲೀಲಾವತಿ ದೇವದಾಸ್‌, ಡಾ. ನಿರುಪಮಾ, ಎ.ಪಿ. ಮಾಲತಿ, ಹೇಮಾ ಪಟ್ಟಣಶೆಟ್ಟಿ ಹಾಗೂ ವಿಳಾಸಗಳನ್ನು ಈ ಲೇಖ ಲೋಕವು ಒಳಗೊಂಡಿದೆ. ಡಾ. ನಳಿನಿ ಮೂರ್ತಿ ಸ್ಮಾರಕ ಪುಸ್ತಕಮಾಲೆಯ ಯೋಜನೆಯ ಐದನೆಯ ಕೃತಿಯು ಇದಾಗಿದೆ. ಎಷ್ಟೇ ಸಂಪ್ರದಾಯಸ್ಥ ಮನೆಯತನದವರಾದರೂ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯಾವುದೇ ಪ್ರತಿಕೂಲ ಪರಿಸ್ಥಿತಿಗೆ ಅಂಜದೆ ಭವಿಷ್ಯದೆಡೆಗೆ ದಿಟ್ಟವಾದ ಹೆಜ್ಜೆಯನ್ನು ಹಾಕುವ ಲೇಖಕಿಯರ ಬದುಕಿನ ಪಯಣದ ಕುರಿತಾದ ಸಂಪೂರ್ಣ ಚಿತ್ರಣ ಇಲ್ಲಿದೆ.

About the Author

ಕೆ. ಉಷಾ ಪಿ. ರೈ
(23 May 1945)

ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ 1945 ಮೇ 23 ರಂದು ಜನಿಸಿದರು. ಎಂ.ಎ ಪದವೀಧರರಾದ ಉಷಾ ಪಿ. ರೈ ಅವರ ತಂದೆ ಸ್ವಾತಂತ್ಯ್ರ ಹೋರಾಟಗಾರ ಹಾಗೂ ನವಯುಗ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ದಿ.ಕೆ ಹೊನ್ನಯ್ಯಶೆಟ್ಟಿ ಮತ್ತು ತಾಯಿ ಕೆ ಪದ್ಮಾವತಿ ಶೆಟ್ಟಿ. ಉಷಾ ಪಿ ರೈ ಅವರ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಡಗೊಂಡಿದ್ದು ಕನ್ನಡದ ಹಿರಿಯ ಲೇಖಕಿ. ಉಷಾ ಅವರ ಮೊದಲ ಕಾದಂಬರಿ “ಅನುಭಂದ”, 1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಂಬರಿಗಳು, ಸಣ್ಣಕಥನಗಳು, ಪ್ರವಾಸ ಕಥನ, ...

READ MORE

Related Books