ಲಕ್ಷ್ಮೀ ಜೀವನದ ಕುರಿತಾದ ಪುಸ್ತಕವನ್ನು ಲೇಖಕ ಎನ್. ರಂಗನಾಥ ಶರ್ಮಾ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಭಾಗ್ಯದೇವತೆ. ಶ್ರೀ ಮಹಾವಿಷ್ಣುವಿನ ಪತ್ನಿ. ವಿಷ್ಣುವು ಬೇರೆ ಬೇರೆ ಅವತಾರಗಳನ್ನೆತ್ತಿದಾಗ ಸೀತೆಯಾಗಿ ಶ್ರೀರಾಮನನ್ನು, ರುಕ್ಮಿಣಿಯಾಗಿ ಶ್ರೀ ಕೃಷ್ಣನನ್ನು, ಪದ್ಮಾವತಿಯಾಗಿ ಶ್ರೀ ವೆಂಕಟೇಶ್ವರನನ್ನು ಕೈ ಹಿಡಿದಳು. ಶೀಲ, ಧರ್ಮ, ಸತ್ಯ, ಅನುಕಂಪ ಎಲ್ಲಿದ್ದರೆ ಅಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಭಕ್ತರ ನಂಬಿಕೆ ಎಂದು ಲಕ್ಷ್ಮೀ ದೆವಿಯ ಕುರಿತಾಗಿ ಈ ಪುಸ್ತಕದಲ್ಲಿ ವರ್ಣಿಸಲಾಗಿದೆ. ಇಲ್ಲಿ ಲಕ್ಷ್ಮೀ ಏವಿಯ ವಿವಿಧ ಅವತಾರಗಳ ಪ್ರಮುಖ ಘಟ್ಟಗಳನ್ನು ಲೇಖಕರಾದ ರಂಗನಾಥಶರ್ಮಾ ಅವರು ಸರಳ ಕನ್ನಡ ಭಾಷೆಯಲ್ಲಿ ವಿವರಿಸಿದ್ದಾರೆ.