ಕುಸುಮಾ ಸೊರಬ

Author : ಶಾರದಾ ಗೋಪಾಲ

Pages 90

₹ 15.00




Year of Publication: 2012
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ಕುಸುಮಾ ಸೊರಬ ಅವರ ಜೀವನಚರಿತ್ರೆ ಕೃತಿ ರಚಿಸಿದವರು ಲೇಖಕಿ ಶಾರದಾ ಗೋಪಾಲ. ಹಿರಿಯ ಪರಿಸರವಾದಿ ಕುಸುಮಾ ಸೊರಬ ಅವರು ತಮ್ಮ ಇಡೀ ಜೀವನವನ್ನು ಪಶ್ಚಿಮ ಘಟ್ಟಗಳ ಉಳಿಸಲು ಮುಡುಪಾಗಿಟ್ಟವರು. ಪ್ರಪಂಚದ 18 ಮಹತ್ವದ ಜೀವಜಾಲ ತಾಣಗಳಲ್ಲಿ ಒಂದಾಗಿರುವ ಕರ್ನಾಟಕದ ಸಹ್ಯಾದ್ರಿಯನ್ನು ಉಳಿಸಿಕೊಳ್ಳುವಲ್ಲಿ ಸತತವಾಗಿ ಹೋರಾಡಿ ಜೀವ ಸವೆಸಿದ ಕುಸುಮಾ ಸೊರಬರವರ ಜೀವನಗಾಥೆಯೇ ಈ ಕೃತಿ. ಇವರ ಹಸಿರಿನ ಹೋರಾಟದ ಕ್ಷಣಗಳನ್ನು ಲೇಖಕಿ ಇಲ್ಲಿ ಸರಳ ಕನ್ನಡ ಭಾಷೆಯಲ್ಲಿ ಚಿತ್ರಿಸಿದ್ದಾರೆ.

About the Author

ಶಾರದಾ ಗೋಪಾಲ

ಲೇಖಕಿ, ಅಂಕಣಗಾರ್ತಿ ಶಾರದಾ ಗೋಪಾಲ್ ಅವರು ಬಿ.ಎಸ್ಸಿ., ಡಿಪ್ಲೊಮಾ (ಪತ್ರಿಕೋದ್ಯಮ) ಪದವೀಧರೆ.  ಜನನ 28 ಜೂನ್ 1960, ಬಕ್ಕೆಮನೆಯಲ್ಲಿ. ತಂದೆ - ನಾರಾಯಣ ಹೆಗ್ಗಡೆ, ತಾಯಿ- ಪಾರ್ವತಿ.  ಅವರ ಅಭ್ಯುದಯದ ಹಾದಿಯಲ್ಲಿ (ಕಥಾಸಂಕಲನ), ಸಾಮಾಜಿಕ ಅರಣ್ಯ , ಔಷಧಿ ಮತ್ತು ನಾವು, ನಿಷೇಧಿತ ಔಷಧಗಳು (ವೈದ್ಯಕೀಯ ಬರಹಗಳು-1991) ಕೃತಿಗಳು ಪ್ರಕಟವಾಗಿವೆ. `ಔಷಧಿ ಮತ್ತು ನಾವು' ಕೃತಿಗೆ ರಾಷ್ಟೋತ್ಥಾನ ಪರಿಷತ್ತಿನ ಎಂ.ಎಸ್.ಎನ್. ಅಯ್ಯಂಗಾರ್ ಪ್ರಶಸ್ತಿ ಲಭಿಸಿದೆ. ...

READ MORE

Related Books